ನೋಟ್ ಬ್ಯಾನ್, ಜಿಎಸ್‍ಟಿಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚು ಆದಾಯ : ಅರುಣ್‍ ಜೇಟ್ಲಿ

Arun-jaitly
ವಿಶಾಖಪಟ್ಟಣಂ, ಜ.27- ನೋಟು ರದ್ಧತಿ ಹಾಗೂ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಇವುಗಳಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ಲಭಿಸಲಿದೆ ಎಂದು ಹಣಕಾಸು ಸಚಿವ ಅರುಣ್‍ಜೇಟ್ಲಿ ಹೇಳಿದ್ದಾರೆ.  ಇಲ್ಲಿ ಇಂದು ನಡೆದ ಸಿಐಐ ಸಹಭಾಗಿತ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನೋಟು ರದ್ಧತಿ ಅನಾನುಕೂಲಗಳು ಅಲ್ಪ ಕಾಲದ್ದು, ಆದರೆ ಅದರಿಂದಾಗುವ ಅನುಕೂಲಗಳು ದೀರ್ಘಕಾಲದ್ದು ಎಂದು ಬಣ್ಣಿಸಿದರು. ಜಿಎಸ್‍ಟಿ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ತಲೆದೋರಿದ್ದ ಬಹು ಭಿನ್ನಾಭಿಪ್ರಾಯಗಳು ನಿವಾರಣೆಗೊಂಡಿದ್ದು, ಇದನ್ನು ಅನುಷ್ಠಾನಗೊಳಿಸುವ ಹಂತ ಅಂತಿಮ ರೂಪದಲ್ಲಿದೆ ಎಂದು ಜೇಟ್ಲಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin