ನೋಟ್ ಬ್ಯಾನ್ ಹೊರತಾಗಿಯೂ 2017ರಲ್ಲಿ ಭಾರತ ಶೇ.7.7ರ ಜಿಡಿಪಿ ಕಾಣಲಿದೆ : ವಿಶ್ವಸಂಸ್ಥೆ

United-Nations

ನವದೆಹಲಿ, ಜ.18- ನೋಟು ಅಪನಗದೀಕರಣದ ಹೊರತಾಗಿಯೂ ಭಾರತ ಅತ್ಯಂತ ವೇಗದಲ್ಲಿ ಅಭಿವೃದ್ಧಿಹೊಂದುತ್ತಿರುವ ವಿಶ್ವದ ಬೃಹತ್ ಆರ್ಥಿಕತೆಯಾಗಿ 2017ರ ಹಣಕಾಸು ವರ್ಷದಲ್ಲಿ ಇದು ಶೇ.7.7ರ ಬೆಳವಣಿಗೆಯನ್ನು ಕಾಣಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.  ವಿಶ್ವಸಂಸ್ಥೆಯ ಜಾಗತಿಕ ಆರ್ಥಿಕ ಮತ್ತು ಭವಿಷ್ಯ ಕುರಿತಾದ 2017ರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈವರದಿಯಲ್ಲಿ 2017ರ ಭಾರತದ ಆರ್ಥಿಕಾಭಿವೃದ್ಧಿಯು ಶೇ.7.7ರ ಬೆಳವಣಿಗೆಯನ್ನು ಕಾಣಲಿದೆ. ಇದರ ಪರಿಣಾಮವಾಗಿ ಖಾಸಗಿ ಬಳಕೆಯೂ ಬಲಗೊಳ್ಳಲಿದ್ದು, ಈ ಮೂಲಕ ಗಮನಾರ್ಹ ಆತಂಕರಿಕ ಸುಧಾರಣೆಗಳು ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

2018ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.7.6ರ ಪ್ರಮಾಣದಲ್ಲಿ ದಾಖಲಾಗಲಿದೆ ಎಂದು ವರದಿಯು ಅಂದಾಜು ಮಾಡಿದೆ. ಎರಡು ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ನೋಟು ಅಪನಗದೀಕರಣದ ಪರಿಣಾಮವಾಗಿ ಭಾರತದ ಆರ್ಥಿಕಾಭಿವೃದ್ಧಿಯನ್ನು ಶೇ.7.6ರಿಂದ ಶೇ.6.6ರ ಮಟ್ಟಕ್ಕೆ ಇಳಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ವಿಶ್ವಸಂಸ್ಥೆ ವರದಿ ಭಾರತದ ಆರ್ಥಿಕ ಪ್ರಗತಿ ಶೇ.7.7ರ ಪ್ರಮಾಣದಲ್ಲಿ 2017ರಲ್ಲಿ ದಾಖಲಾಗಲಿದೆ ಎಂದು ಹೇಳಿರುವುದು ಗಮನಾರ್ಹವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin