ನೌಕಾಧಿಕಾರಿಗೆ ಕಪಾಳಮೋಕ್ಷ ಮಾಡಿ ಅಶಿಸ್ತು ತೋರಿದ ನಾವಿಕರನ್ನು ಹೆಲಿಕಾಪ್ಟರ್ ಹೊತ್ತೊಯ್ದರು..!

ins-sandhayak

ನವದಹೆಲಿ, ಮಾ.10- ಅತಿ ಶಿಸ್ತು ಮತ್ತು ಕರ್ತವ್ಯಕ್ಕೆ ಹೆಸರಾದ ಭಾರತೀಯ ನೌಕಾ ಪಡೆಯಲ್ಲಿ ಅಶಿಸ್ತು ಮತ್ತು ಕರ್ತವ್ಯಲೋಪದ ಘಟನೆಯೊಂದು ನಡೆದಿದೆ. ನೌಕಾಧಿಕಾರಿಯನ್ನು ಥಳಿಸಿದ ಆರೋಪದ ಮೇಲೆ ನಾಲ್ವರು ನಾವಿಕರನ್ನು (ಯೋಧರು) ಹೆಲಿಕಾಪ್ಟರ್ ಮೂಲಕ ನೌಕೆಯಿಂದ ಹೊರಕ್ಕೆ ಎತ್ತೊಯ್ಯಲಾಗಿದೆ. ಒಡಿಶಾ ಕರಾವಳಿಯ ಪರದೀಪ್‍ನಲ್ಲಿ ಈ ಘಟನೆ ನಡೆದಿದೆ.
ಸರ್ವೆ ನೌಕೆ ಐಎನ್‍ಎಸ್ ಸಂಧಾಯಕ್ ನೌಕೆಯಲ್ಲಿ ಸರ್ವೆ ಮೋಟಾರ್ ಬೋಟ್‍ಗಳನ್ನು ಮೇಲಕ್ಕೆ ಎಳೆಯುವಂತೆ ಹಿರಿಯ ನೌಕಾಧಿಕಾರಿಯೊಬ್ಬರು ನಾವಿಕರಿಗೆ ಆದೇಶ ನೀಡಿದರು. ಆದರೆ ಈ ಆದೇಶ ಪಾಲಿಸದ ನಾವಿಕರು ಅಧಿಕಾರಿ ಜೊತೆ ವಾಗ್ವಾದಕ್ಕಿಳಿದು ಕಪಾಳಮೋಕ್ಷ ಮಾಡಿ ಥಳಿಸಿದರು.

ಅಶಿಸ್ತು ಮತ್ತು ಕರ್ತವ್ಯ ಲೋಪದ ಆರೋಪ ಮೇಲೆ ನಾಲ್ವರು ನಾವಿಕರನ್ನು ನೌಕೆಯಿಂದ ಹೊರಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ನಂತರ ಹೆಲಿಕಾಪ್ಟರ್ ಮೂಲಕ ಅವರನ್ನು ಬೇರೆಡೆಗೆ ಸ್ಥಳಾಂತರಿಲಾಗಿದೆ. ಈ ಘಟನೆ ಬಗ್ಗೆ ಕೋರ್ಟ್ ಮಾರ್ಷಲ್ ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin