ನ್ಯಾಯಾಧೀಶರ ನಿರ್ಧಾರ ಖಂಡಿಸಿ ಪ್ರತಿಭಟನೆ

Kaduru--Advocates

ಕಡೂರು, ಆ.29- ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ವೃತ್ತ ನಿರೀಕ್ಷಕ ಮಾರಪ್ಪ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ಪ್ರಧಾನ ನ್ಯಾಯಾಧೀಶರು ತೆಗೆದುಕೊಂಡು ನಿರ್ಧಾರವನ್ನು ಖಂಡಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಳೆದ ಆಗಸ್ಟ್ 23 ರಂದು ಚನ್ನರಾಯಪಟ್ಟಣದ ಪ್ರಧಾನ ನ್ಯಾಯಾಧೀಶರ ಮೇಲೆ ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕ ಮಾರಪ್ಪ ಮತ್ತು ಸಂಗಡಿಗರು ಚನ್ನರಾಯಪಟ್ಟಣ ಪಿಎಸ್‍ಐ ರಂಗಸ್ವಾಮಿ ನ್ಯಾಯಾಲಯದ ಮತ್ತು ನ್ಯಾಯಾಧೀಶರ ಕಲಾಪಕ್ಕೆ ಅಡ್ಡಿಪಡಿಸಿ ನ್ಯಾಯಾಲಯದ ದಸ್ತಗಿರಿ ಆದೇಶವನ್ನು ಜಾರಿ ಮಾಡದೆ ಕರ್ತವ್ಯಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಉಪಾಧ್ಯಕ್ಷ ಹುಲ್ಲೇಹಳ್ಳಿ ರಾಜಶೇಖರ್ ಆಗ್ರಹಿಸಿದರು.

ಈ ಪ್ರಕರಣದ ತನಿಖೆಗೆ ತೆರಳಿದ್ದ ಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಪ್ರಧಾನ ನ್ಯಾಯಾಧೀಶರು ಹೊರಡಿಸಿದ್ದ ಜಮೀನು ರಹಿತ ಬಂಧನ ಆದೇಶವನ್ನು ವಾಪಸ್ ಪಡೆದಿರುವುದು ನ್ಯಾಯಾಲಯದ ನಿಯಮಗಳ ಉಲ್ಲಂಘನೆಯಾಗಿರುತ್ತದೆ, ಇವರ ವಿರುದ್ದವೂ ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ನಂತರ ತಾಲೂಕು ಕಚೇರಿಗೆ ತೆರಳಿದ ವಕೀಲರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದಲ್ಲದೆ ರಾಜ್ಯಪಾಲರು, ಗೃಹ ಮತ್ತು ಕಾನೂನು ಖಾತೆ ಸಚಿವರಿಗೂ ಮನವಿಯನ್ನು ಅಂಚೆ ಮೂಲಕ ಕಳುಹಿಸಿದರು.ಕಾರ್ಯದರ್ಶಿ ಸೂರಿ ಶ್ರೀನಿವಾಸ್, ಸಹ ಕಾರ್ಯದರ್ಶಿ ಅಮೃತೇಶ್, ಆರ್. ಸತೀಶ್, ಕೆ.ಪಿ. ನೀಲಕಂಠಪ್ಪ, ಟಿ.ಎಸ್. ಶಾಮ್, ಕೆ.ಎನ್. ಬೊಮ್ಮಣ್ಣ, ಕೆ.ಜಿ. ಪ್ರಕಾಶ್, ಚಿದಂಬರ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin