ನ್ಯಾಯಾಲಯದಲ್ಲಿ ದಾಖಲೆ ಕದಿಯುತ್ತಿದ್ದ ಗುಮಾಸ್ತನ ಬಂಧನ
ಬಾಗೇಪಲ್ಲಿ, ಮೇ 28– ನ್ಯಾಯಾಲಯದಲ್ಲಿ ದಾಖಲೆಗಳನ್ನು ಕದಿಯುತ್ತಿದ್ದ ಗುಮಾಸ್ತನನ್ನು ನ್ಯಾಯಾಧೀಶರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಟ್ಟಣದ ನ್ಯಾಯಾಲಯದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಸುರೇಶ್ ಬಂಧಿತ ಆರೋಪಿ. ರಾತ್ರಿ 8ರ ಸುಮಾರಿನಲ್ಲಿ ಬೀಗ ರಿಪೇರಿ ಮಾಡುವವರನ್ನು ಕರೆತಂದು ಬೀಗ ತೆಗೆಸಿ ನ್ಯಾಯಾಲಯದ ಒಳ ಹೋಗಿ ಅಗತ್ಯ ದಾಖಲೆಗಳನ್ನು ಕದಿಯಲು ಯತ್ನಿಸಿದ್ದ.
ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಪ್ರಥಮದರ್ಜೆ ನ್ಯಾಯಾಧೀಶರಾದ ಪ್ರವೀಣ್ ಅವರು ಗುಮಾಸ್ತ ಸುರೇಶ್ ಹಾಗೂ ಜತೆಯಲ್ಲಿದ್ದ ಆಸಿಫ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >