ನ್ಯಾಯ ಕೇಳಿ ಬಂದವಳನ್ನು ಮಂಚಕ್ಕೆ ಕರೆದ ಚಪಲ ಚೆನ್ನಿಗ..!

Officer--01

ಹೊಸಪೇಟೆ(ಕಮಲಾಪುರ), ಜೂ.30-ನ್ಯಾಯಕ್ಕಾಗಿ ಮೊರೆಯಿಟ್ಟ ಮಹಿಳೆಯೊಂದಿಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ ಅವರು ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.  ತಮ್ಮ ಮನೆಯ ಮುಂದೆ ನಿರ್ಮಿಸಿದ್ದ ಶೌಚಾಲಯವನ್ನು ಕಮಲಾಪುರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ ಅವರಿಗೆ ಮಹಿಳೆಯೊಬ್ಬರು ಮನವಿ ಮಾಡಿದ್ದರು.  ಈ ಸಂದರ್ಭದಲ್ಲಿ ಆ ಮಹಿಳೆಗೆ ದೂರವಾಣಿ ಕರೆ ಮಾಡಿದ ಪ.ಪಂ. ಸಿಒ ಕಟ್ಟಿಮನಿ ಅವರು ಅಸಭ್ಯವಾಗಿ ಮಾತನಾಡಿದ್ದಾರೆ. ನಿಮ್ಮ ಮನೆಗೆ ಬರ್ತೇನೆ, ಹತ್ತು ನಿಮಿಷ ಮಲಗಿ ಹೋಗ್ತೇನೆ.

ಇಲ್ಲದಿದ್ದರೆ ಕಮಲಾಪುರದ ನಮ್ಮ ಮನೆಗೆ ನೀನು ಬಾ ಎಂದು ಕರೆದಿದ್ದಾರೆ. ಈ ಎಲ್ಲಾ ಮಾತುಗಳನ್ನು ಆ ಮಹಿಳೆ ದೂರವಾಣಿಯಲ್ಲಿ ರೆಕಾರ್ಡ್ ಮಾಡಿಕೊಂಡು ದೂರು ನೀಡಿದ್ದಾರೆ.  ದೂರು ನೀಡಿರುವುದು ತಿಳಿಯುತ್ತಿದ್ದಂತೆ ಈ ಅಧಿಕಾರಿ ಆ ಮಹಿಳೆ ಮೇಲೆ ನನ್ನ ವಿರುದ್ಧ ದೂರು ನೀಡುತ್ತೀಯಾ ಎಂದು ಧಮ್ಕಿ ಸಹ ಹಾಕಿದ್ದಾನೆ. ಅಲ್ಲದೆ ನಿನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿರುವುದು ಡಿಲಿಟ್ ಮಾಡು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin