ನ್ಯೂಯಾರ್ಕ್ ಏರ್ಪೋರ್ಟ್’ನಲ್ಲಿ ತೀವ ತಪಾಸಣೆಗೊಳಗಾದ ಜಮ್ಮು ಸಿಎಂ ಓಮರ್ ಅಬ್ದುಲ್ಲಾ

Omer-abdullha

ನ್ಯೂಯಾರ್ಕ್, ಅ.17-ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರನ್ನು ನ್ಯೂಯಾರ್ಕ್ ವಿಮಾನನಿಲ್ದಾಣದಲ್ಲಿ ಹೆಚ್ಚುವರಿ ವಲಸೆ ತಪಾಸಣೆಗಾಗಿ ಅಧಿಕಾರಿಗಳು ಎರಡು ತಾಸುಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ ಘಟನೆ ನಡೆದಿದೆ.  ಅಮೆರಿಕದ ಏರ್ಪೋರ್ಟ್’ಗಳಲ್ಲಿ ಪ್ರತಿ ಬಾರಿಯು ತಮ್ಮನ್ನು ಇಮಿಗ್ರೇಷನ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸುತ್ತಿರುವ ಬಗ್ಗೆ ಓಮರ್ ಅಬ್ದುಲ್ಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಓಮರ್‍ಗೆ ಈ ಅನುಭವವಾಗುತ್ತಿರುವುದು ಮೂರನೇ ಬಾರಿ. ಈ ಕುರಿತು ಟ್ವೀಟ್ ಮಾಡಿರುವ ಅವರು ನಾನು ಆ ಸ್ಥಳದಲ್ಲಿ ಎರಡು ಗಂಟೆಗಳ ಕಾಲ ವಿಚಾರಣೆಯಲ್ಲಿ ಕಳೆಯಬೇಕಾಯಿತು. ಪ್ರತಿ ಬಾರಿ ನನಗೆ ಈ ಅನುಭವವಾಗುತ್ತಿದೆ.

ಎನ್‍ವೈಯು ಸಂಘಟನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ನಾನು ನ್ಯೂಯಾರ್ಕ್‍ಗೆ ತೆರಳಿದೆ. ಆದರೆ ವಲಸೆ ಅಧಿಕಾರಿಗಳು ವಿನಾಕರಣ ನನ್ನನ್ನು ತಪಾಸಣೆಗೆ ಒಳಪಡಿಸಿದರು. ಇಲ್ಲಿಗೆ ಬರುವ ಬದಲು ಮನೆಯಲ್ಲಿದ್ದರೆ ಚೆನ್ನಾಗಿರುತ್ತಿತ್ತು.. ಎರಡು ಗಂಟೆಗಳ ಕಾಲ ವ್ಯರ್ಥವಾಯಿತು ಎಂದು ಓಮರ್ ತಮಗೆ ಆದ ಕಹಿ ಅನುಭವವನ್ನು ವಿವರಿಸಿದ್ದಾರೆ.
ಬಾಲಿವುಡ್ ಸೂಪರ್‍ಸ್ಟಾರ್ ಶಾರುಖ್ ಖಾನ್ ಅವರನ್ನೂ ಕೂಡ ಎರಡು ಬಾರಿ ಅಮೆರಿಕದ ಏರ್ಪೋರ್ಟ್’ಗಳಲ್ಲಿ ಇದೇ ರೀತಿ ವಿಚಾರಣೆಗೆ ಒಳಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

► Follow us on –  Facebook / Twitter  / Google+

Sri Raghav

Admin