ಪಂಚರಾಜ್ಯ ಫಲಿತಾಂಶ : ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ. ಗೆದ್ದವರಾರು ? ಸೋತವರಾರು ?

Spread the love

Result--01

ನವದೆಹಲಿ,ಮಾ.11-ಪ್ರಧಾನಿ ನರೇಂದ್ರ ಮೋದಿ ಎಂಬ ದೈತ್ಯ ಸುನಾಮಿಯ ಅಲೆಯ ಮುಂದೆ ಆಡಳಿತಾರೂಢ ಎಸ್‍ಪಿ, ಕಾಂಗ್ರೆಸ್, ಬಿಎಸ್‍ಪಿ ಪಕ್ಷಗಳು ಕೊಚ್ಚಿ ಹೋಗಿದ್ದು , ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತ ಪಡೆಯುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ.
ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 325 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಎಲ್ಲ ರಾಜಕೀಯ ಲೆಕ್ಕಾಚಾರಗಳ ಸಮೀಕ್ಷೆಗ ಳನ್ನು ಉಲ್ಟಾ ಮಾಡಿದೆ. ಬಿಜೆಪಿ ಅಬ್ಬರಕ್ಕೆ ಸೈಕಲ್ ಪಂಕ್ಚರ್ ಆದರೆ, ಕೈಗೆ ಮರ್ಮಾಘಾತವಾಗಿ, ಬಿಎಸ್‍ಪಿ ಅನೆ ಮೇಲೇಳದಷ್ಟು ಪಾತಾಳಕ್ಕೆ ಕುಸಿದಿದೆ.
ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ 54, ಬಿಎಸ್‍ಪಿ 19 ಹಾಗೂ ಇತರರು 03 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.   ಉತ್ತರಾಖಂಡ್‍ನಲ್ಲಿ ಬಿಜೆಪಿ 3ನೇ ಎರಡಷ್ಟು ಬಹುಮತ ಪಡೆದಿದೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 57 ಪಡೆದರೆ, ಪಂಜಾಬ್‍ನಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಗದ್ದುಗೆ ಹಿಡಿದಿದೆ. ಕಡಲ ಕಿನಾರೆ ಪುಟ್ಟ ರಾಜ್ಯ ಗೋವಾ ಮತ್ತು ಮಣಿಪುರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಕಂಡುಬಂ ದಿವೆ.

ಮೋದಿ ಸುನಾಮಿ:

ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿ ಎಂದೇ ಹೇಳಲಾಗಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಮಿತ್ ಷಾ ಜೋಡಿ ಮಾಡಿದ ಮೋಡಿ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆದಿದೆ.  2014ರ ಲೋಕಸಭೆ ಚುನಾವಣೆಯ ಫಲಿತಾಂಶ ಪುನರಾವರ್ತನೆಗೊಂಡಿದ್ದು, ಎರಡೂವರೆ ದಶಕಗಳ ನಂತರ ರಾಜ್ಯದಲ್ಲಿ ಯಾರ ಹಂಗಿಲ್ಲದೆ ಸ್ವಂತ ಬಲದ ಮೇಲೆ ಕಮಲ ಅಧಿಕಾರ ಸ್ಥಾಪಿಸಿದೆ.   ಉತ್ತರಪ್ರದೇಶ ಇತಿಹಾಸದಲ್ಲೇ ಈವರೆಗೂ ರಾಜಕೀಯ ಪಕ್ಷವೊಂದು 325ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ನಿದರ್ಶನಗಳಿಲ್ಲ. ಚುನಾವಣಾ ಸಮೀಕ್ಷೆಗಳು ಕೂಡ ಬಿಜೆಪಿ ಇಷ್ಟು ಪ್ರಮಾಣದಲ್ಲಿ ಗೆಲ್ಲಲಿದೆ ಎಂದು ಅಂದಾಜಿಸಿರಲಿಲ್ಲ. ಸರಳ ಬಹುಮತ ಇಲ್ಲವೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಭವಿಷ್ಯ ನುಡಿದಿದ್ದವು. ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದೆ.

2019ರ ಲೋಕಸಭೆ ಚುನಾವಣೆಗೆ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಉತ್ತರಪ್ರದೇಶದ ಗೆಲುವು ಭಾರೀ ಶಕ್ತಿಯನ್ನೇ ನೀಡಿದೆ. ದೆಹಲಿ ಹಾಗೂ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಕಮಲ ಪಡೆ ನಾಯಕರಿಗೆ ಇದು ಎದೆಯುಬ್ಬಿಸುವಂತೆ ಮಾಡಿದೆ.
500 ಹಾಗೂ 1000 ನೋಟುಗಳ ಅಮಾನೀಕರಣ, ಸರ್ಜಿಕಲ್ ಸ್ಟ್ರೈಕ್ ನಂತರ ಈ ಚುನಾವಣೆ ನರೇಂದ್ರಮೋದಿ ನಾಯಕತ್ವಕ್ಕೆ ಉತ್ತರಪ್ರದೇಶ ಚುನಾವಣೆ ಓರೆಗಲ್ಲೇ ಎಂದು ವಿಶ್ಲೇಷಿಸಲಾಗಿತ್ತು. ಅದರಲ್ಲೂ ನೋಟು ಅಮಾನೀಕರಣದ ನಂತರ ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಮೇಲೆ ಬಿಗಿಮುದ್ದಿದ್ದವು.

ಆದರೆ ಇದೀಗ ಪ್ರಕಟಣಗೊಂಡಿರುವ ಫಲಿತಾಂಶದಲ್ಲಿ ನೋಟು ಅಮಾನೀಕರಣಕ್ಕೆ ದೇಶದ ಜನತೆ ಸಂಪೂರ್ಣ ಬೆಂಬಲ ನೀಡಿರುವುದು ಗೋಚರಿಸಿದೆ.
ಇನ್ನು ಬಿಜೆಪಿ ರಾಜ್ಯದಲ್ಲಿ ನಡೆಸಿದ ಜಾತಿ ಧ್ರುವೀಕರಣದ ಮುಂದೆ ಸಮಾಜವಾದಿ ಪಕ್ಷದ ಆಂತರಿಕ ಕಲಹ, ಮಾಯವತಿಯ ಏಕಮೇವ ಅದ್ವಿತೀಯ ನಾಯಕತ್ವಕ್ಕೆ ಭಾರೀ ಬೆಲೆ ತೆತ್ತಿದೆ. ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ರಾಜಕೀಯ ಜಾಣ್ಮೆ ಮೆರೆದಿದ್ದ ಕಾಂಗ್ರೆಸ್ ಪಕ್ಷವನ್ನು ಮತದಾರ ಸಾರಸಗಟಾಗಿ ತಿರಸ್ಕರಿಸಿದ್ದಾನೆ.   ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ದಿ ಮಂತ್ರ, ದಲಿತರು, ಹಿಂದುಳಿದವರಿಗೆ ಹೆಚ್ಚಿನ ಟಿಕೆಟ್ ನೀಡಿರುವುದು, ಖುದ್ದು ತಾವೇ ಗಲ್ಲಿ ಗಲ್ಲಿಗಳ ಮೂಲಕ ರೋಡ್ ಶೋ ನಡೆಸಿದ್ದು ಮತದಾರನ ಮೇಲೆ ಭಾರೀ ಪ್ರಭಾವ ಬೀರಿದೆ.

ಆರಂಭದಿಂದಲೇ ಮುನ್ನಡೆ:

ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕೊನೆಯ ಸುತ್ತಿನವರೆಗೂ ಕಾಯ್ದುಕೊಂಡಿತ್ತು.
ಮೊದಲ ಸುತ್ತಿನಲ್ಲಿ ಎಸ್‍ಪಿ, ಬಿಎಸ್‍ಪಿ ಒಂದಿಷ್ಟು ಪೈಪೋಟಿ ನೀಡಿದವಾದರೂ ತದನಂತರ ಬಿಜೆಪಿ ಫಿನಿಕ್ಸ್‍ನಂತೆ ಎದ್ದು ಬಹುತೇಕ ಎಲ್ಲ ಕಡೆಯೂ ಕಮಲ ಅರಳಿತು.   ರಾಜ್ಯದ ಅವಧ್, ಪೂರ್ವಾಂಚಲ, ಬುಂದೇಲ್‍ಖಂಡ್, ಪೂರ್ವಪ್ರದೇಶ, ಗೋರಖ್‍ಪುರ, ವಾರಣಾಸಿ ಸೇರಿದಂತೆ ಬಹುತೇಕ ಎಲ್ಲ ಕಡೆಯೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.

ದಲಿತರು, ಜಾಟರು, ರಜಪೂತರು, ಕುರ್ಮಿ, ಬ್ರಾಹ್ಮಣರು ಸೇರಿದಂತೆ ಎಲ್ಲಾ ಸಮುದಾಯದವರು ಬಿಜೆಪಿಯ ಕೈ ಹಿಡಿದಿವೆ.   ಈ ಸಮುದಾಯಗಳ ಮೇಲೆ ಕಣ್ಣಿಟ್ಟಿದ್ದ ಎಸ್‍ಪಿ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದರೆ, ಮಾಯವತಿಯ ದಲಿತ ಬ್ಯಾಂಕ್ ಭದ್ರವಾಗಿದೆ. ಆದರೆ ಸೀಟು ಗಳಿಕೆಯಲ್ಲಿ ಅವರು ಭಾರೀ ಮುಖಭಂಗ ಅನುಭವಿಸಿದ್ದಾರೆ.   6 ಮತ್ತು 7ನೇ ಸುತ್ತಿನ ಮತದಾನದ ವೇಳೆ ಖುದ್ದು ಮೂರು ದಿನ ವಾರಣಾಸಿಯಲ್ಲೇ ವಾಸ್ತವ್ಯ ಹೂಡಿದ್ದ ನರೇಂದ್ರ ಮೋದಿ ಮೋಡಿಗೆ ಮತದಾರರ ಒಲಿದಿದ್ದಾನೆ.   ಗೋರಖ್‍ಪುರ, ವಾರಣಾಸಿ, ಲಕ್ನೋ ಸೇರಿದಂತೆ ಅನೇಕ ಕಡೆ ಬಿಜೆಪಿ ಈ ಎರಡೂ ಪಕ್ಷಗಳನ್ನು ಗುಡಿಸಿ ಹಾಕಿದೆ.   ಈ ಚುನಾವಣೆ ರಾಷ್ಟ್ರ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ ದೇಶದಲ್ಲೇ ಅತಿಹೆಚ್ಚು ಸಂಸದರನ್ನು ಹೊಂದಿರುವ ಉತ್ತರಪ್ರದೇಶದ ಗೆಲುವು ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ಗೆಲುವಿಗೆ ಮೆಟ್ಟಿಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

+ ಉತ್ತರ ಪ್ರದೇಶ :

ಒಟ್ಟು ಸ್ಥಾನಗಳು : 403
ಮ್ಯಾಜಿಕ್ ಸಂಖ್ಯೆ : 202
ಬಿಜೆಪಿ : 325
ಕಾಂಗ್ರೆಸ್ +ಸಮಾಜವಾದಿ ಪಾರ್ಟಿ (ಎಸ್ಪಿ) : 54
ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)  : 19
ಇತರೆ : 03


+ ಪಂಜಾಬ್ :

ಒಟ್ಟು ಸ್ಥಾನಗಳು : 117
ಮ್ಯಾಜಿಕ್ ಸಂಖ್ಯೆ : 59
ಕಾಂಗ್ರೆಸ್ : 77
ಬಿಜೆಪಿ + ಅಕಾಲಿದಳ: 18
ಆಮ್ ಆದ್ಮಿ ಪಾರ್ಟಿ (ಎಎಪಿ) : 22
ಇತರೆ : 00


+ ಉತ್ತರಾಖಂಡ್

ಒಟ್ಟು ಸ್ಥಾನಗಳು : 70
ಮ್ಯಾಜಿಕ್ ಸಂಖ್ಯೆ : 36
ಬಿಜೆಪಿ : 57
ಕಾಂಗ್ರೆಸ್ : 11
ಇತರೆ : 02


+ ಮಣಿಪುರ :

ಒಟ್ಟು ಸ್ಥಾನಗಳು : 60
ಮ್ಯಾಜಿಕ್ ಸಂಖ್ಯೆ : 31
ಬಿಜೆಪಿ : 21
ಕಾಂಗ್ರೆಸ್ : 28
ಇತರೆ : 11


+ ಗೋವಾ :

ಒಟ್ಟು ಸ್ಥಾನಗಳು : 40
ಮ್ಯಾಜಿಕ್ ಸಂಖ್ಯೆ : 21
ಬಿಜೆಪಿ : 14
ಕಾಂಗ್ರೆಸ್ : 18
ಆಮ್ ಆದ್ಮಿ ಪಾರ್ಟಿ (ಎಎಪಿ) : 00
ಇತರೆ : 08


ಸೋತವರು
election-looswers

+ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ (ಬಿಜೆಪಿ),
ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ (ಕಾಂಗ್ರೆಸ್),
ಮಾನವ ಹಕ್ಕುಗಳ ಕಾರ್ಯಕರ್ತೆ ಇರೋಮ್ ಶರ್ಮಿಳಾ (ಪಿಆರ್‍ಜೆಎ),
ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ (ಎಸ್‍ಪಿ),
ಭಗವಂತ ಸಿಂಗ್ ಮಾನ್ (ಎಎಪಿ)


ಗೆದ್ದವರು

winner
ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (ಕಾಂ),
ಪಂಜಾಬ್ ಮುಖ್ಯಮಂತ್ರಿ, ಪ್ರಕಾಶ್ ಸಿಂಗ್ ಬಾದಲ್ (ಎಸ್‍ಎಡಿ),
ಪಂಜಾಬ್ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ (ಎಸ್‍ಎಡಿ),
ಮಣಿಪುರ ಮುಖ್ಯಮಂತ್ರಿ ಇಬೋಬಿ ಓಕ್ರಾಂ ಸಿಂಗ್ (ಕಾಂಗ್ರೆಸ್),
ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಸಿಂಗ್ ಯಾದವ್ (ಎಸ್‍ಪಿ),
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin