ಪಂದ್ಯ ಗೆದ್ದರೂ ಸರಣಿ ಸೋತ ವೆಸ್ಟ್ ವಿಂಡೀಸ್

Pakistan-v-West-Indies
ಶಾರ್ಜಾ, ನ.3-
ಪಾಕಿಸ್ತಾನ ವಿರುದ್ಧ ನಡೆದ 3ನೆ ಟೆಸ್ಟ್ ಪಂದ್ಯವನ್ನು 5 ವಿಕೆಟ್‍ಗಳಿಂದ ವೆಸ್ಟ್‍ಇಂಡೀಸ್ ತಂಡವು ಗೆದ್ದರೂ ಕೂಡ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರಿಂದ ಸರಣಿಯನ್ನು 2-1 ರಿಂದ ಕೈಚೆಲ್ಲಿತು.ಅಂತಿಮ ಪಂದ್ಯದಲ್ಲಿ ಗೆಲ್ಲಲು 152 ರನ್‍ಗಳ ಸವಾಲು ಪಡೆದ ವೆಸ್ಟ್‍ಇಂಡೀಸ್ ಆರಂಭಿಕ ಆಟಗಾರ ಕೆ.ಸಿ.ಬ್ರಾಥ್‍ವೇಟ್ (60 ರನ್, 6 ಬೌಂಡರಿ) ಹಾಗೂ ಡ್ರೋವಿಚ್ (60 ರನ್, 7 ಬೌಂಡರಿ, 1 ಸಿಕ್ಸರ್)ರ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‍ಗಳಿಂದ ಜಯಿಸಿತು. ಪಂದ್ಯದಲ್ಲಿ ಮಿಂಚಿದ ಬ್ರಾಥ್‍ವೇಟ್ ಪಂದ್ಯಪುರುಷೋತ್ತಮ ಹಾಗೂ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನದ ಯಾಸೀರ್ ಶಾ ಸರಣಿ ಪುರುಷೋತ್ತಮರಾದರು.

skysports-jason-holder-west-indies-pakistan-test-cricket_3821966

► Follow us on –  Facebook / Twitter  / Google+

Sri Raghav

Admin