ಪಂಬಾಜ್‍ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಉಗ್ರನ ಹತ್ಯೆ

Spread the love

Encounter--01

ಅಮೃತಸರ, ಮಾ.27- ಪಂಬಾಜ್‍ನ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಉಗ್ರನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು ಇಂದು ಗುಂಡಿಟ್ಟು ಕೊಂದಿದ್ಧಾರೆ. ಬಿಎಸ್‍ಎಫ್ ಯೋಧರು ಇಂದು ಬೆಳಿಗ್ಗೆ ಗಸ್ತಿನಲ್ಲಿದ್ದಾಗ ಪಂಜಾಬ್‍ನ ಗುರುದಾಸ್‍ಪುರ್ ವಲಯದ ಪಹರಿಪುರ್ ಗಡಿ ಠಾಣೆ ಬಳಿ ಅಂತಾರಾಷ್ಟ್ರೀಯ ಗಡಿ ಬಳಿ ಬೇಲಿಯ ಆಚೆ ಕೆಲವರ ಚಲನವಲ ಕಂಡುಬಂದಿತು. ಶಂಕಿತ ನುಸುಳುಕೋರನೊಬ್ಬ ಯೋಧರ ಎಚ್ಚರಿಕೆಯನ್ನೂ ಲೆಕ್ಕಿಸದೇ ಒಳನುಸುಳಲು ಯತ್ನಿಸಿದ. ಆತನನ್ನು ನಂತರ ಗುಂಡಿಟ್ಟು ಕೊಲ್ಲಲಾಯಿತು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಈ ಗಡಿ ಪ್ರದೇಶವನ್ನು ಬಂದ್ ಮಾಡಲಾಗಿದ್ದು, ಇಲ್ಲಿ ಇರಬಹುದಾದ ಇತರ ಶಂಕಿತ ಅತಿಕ್ರಮಣಕಾರರಿಗೆ ತೀವ್ರ ಶೋಧ ನಡೆಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin