ಪಕ್ಷದ ಕಚೇರಿಯಲ್ಲಿನ ಆಂತರಿಕ ಮಾಹಿತಿ ಸೋರಿಕೆಯಾದರೆ ನಿರ್ದಾಕ್ಷಿ ಣ್ಯ ಕ್ರಮ : ಯಡಿಯೂರಪ್ಪ ಎಚ್ಚರಿಕೆ

Yadiyurappa-01

ಬೆಂಗಳೂರು,ಮೇ 24-ಪಕ್ಷದ ಕಚೇರಿಯಲ್ಲಿ ನಡೆಯುವ ಯಾವುದೇ ರೀತಿಯ ಆಂತರಿಕ ಮಾಹಿತಿಗಳನ್ನು ಸೋರಿಕೆ ಮಾಡಿದರೆ ಅಂತಹ ಸಿಬ್ಬಂದಿಯನ್ನು ನಿರ್ದಾಕ್ಷ್ಯಿಣ್ಯವಾಗಿ ಕೂಡಲೇ ಹೊರ ಹಾಕಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಪಕ್ಷದಲ್ಲಿನ ಕೆಲವು ಗೌಪ್ಯ ಮಾಹಿತಿಗಳು ಪದೇ ಪದೇ ಸೋರಿಕೆಯಾಗುತ್ತಿವೆ. ಇದರಿಂದ ಪಕ್ಷದ ವರ್ಚಸ್ಸಿಗೆ ಸಾಕಷ್ಟು ಹಾನಿಯಾಗಿದೆ. ಕಚೇರಿ ಸಿಬ್ಬಂದಿಯೇ ಇಂತಹ ಮಾಹಿತಿಗಳನ್ನು ಎದುರಾಳಿಗಳಿಗೆ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಹೀಗೆ ಮುಂದುವರೆದರೆ ಅಂಥವರನ್ನು ಕಚೇರಿಯಿಂದ ತಕ್ಷಣವೇ ಕಿತ್ತು ಹಾಕುವುದಾಗಿ ಗುಡುಗಿದ್ದಾರೆ.ಚುನಾವಣೆ ಹತ್ತಿರುವಾಗಿರುವ ಈ ಸಂದರ್ಭದಲ್ಲಿ ಪಕ್ಷದೊಳಗಿನ ಕೆಲವು ಆಂತರಿಕ ಬೆಳವಣಿಗೆಗಳನ್ನು ನಮ್ಮ ವಿರೋಧಿ ಬಣಕ್ಕಾಗಿ ಇಲ್ಲವೇ ಎದುರಾಳಿಗಳಿಗೆ ನೀಡಿದರೆ ಅದು ವಿವಾದ ಸೃಷ್ಟಿಯಾಗುತ್ತದೆ. ಕಚೇರಿಯಲ್ಲಿನ ಸಿಬ್ಬಂದಿ ಇಂತಹ ಕೆಲಸದಲ್ಲಿ ನಿರತರಾಗಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳ ಬೇಕೆಂದು ತಾಕೀತು ಮಾಡಿದ್ದಾರೆ.  ಏನೇ ಮಾಹಿತಿಗಳಿದ್ದರೂ ಪಕ್ಷದ ಚೌಕಟ್ಟಿನೊಳಗೆ ಇರಬೇಕು. ನಿಮ್ಮ ಈ ನಡವಳಿಕೆಯಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ನಾನು ಪಕ್ಷದ ಹಿತದೃಷ್ಟಿಯಿಂದ ಯಾವುದೇ ಕ್ರಮ ತೀರ್ಮಾನ ಕೈಗೊಂಡರೂ ಅದು ಸೋರಿಕೆಯಾಗಬಾರದು. ಕೆಲವು ಸಂದರ್ಭಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.

ಕಳೆದ 20ರಂದು ಕಚೇರಿಯ ಎಲ್ಲ ಸಿಬ್ಬಂದಿಯೊಂದಿಗೆ ಸಭೆ ನಡೆಸಿರುವ ಬಿಎಸ್‍ವೈ ಚುನಾವಣಾ ಸಂದರ್ಭದಲ್ಲಿ ನಮ್ಮ ಕೆಲ ಮಾಹಿತಿಗಳು ಬೇರೆಯವರ ಕೈ ಸೇರುತ್ತಿರುವುದು ಅತ್ಯಂತ ನೋವಿನ ಸಂಗತಿ. ಇದಕ್ಕೆ ಆಸ್ಪದ ಇಲ್ಲದಂತೆ ಎಲ್ಲರೂ ಎಚ್ಚರವಹಿಸಬೇಕೆಂದು ಸೂಚಿಸಿದ್ದಾರೆ.   10 ಗಂಟೆ ಮೇಲೆ ಕಚೇರಿಯಲ್ಲಿ ಇರ ಬಾರದು: ಇನ್ನು ಮುಂದೆ ರಾತ್ರಿ 10 ಗಂಟೆ ನಂತರ ಯಾವುದೇ ಸಿಬ್ಬಂದಿ ಕೆಲಸ ಮಾಡ ದಂತೆ ತಾಕೀತು ಮಾಡಿದ್ದಾರೆ. ಈ ಸಂಬಂಧ ಕಚೇರಿ ಕಾರ್ಯದರ್ಶಿಗೆ ಎಲ್ಲರ ಮೇಲೆ ನಿಗಾ ವಹಿಸು ವಂತೆ ಯಡಿಯೂರಪ್ಪ ನಿರ್ದೇಶಿಸಿದ್ದಾರೆ.

ಒಂದು ವೇಳೆ ಯಾರಾದರೂ ಮಾಹಿತಿ ಸೋರಿಕೆ ಮಾಡಿರುವುದು ಸಾಬೀತಾದರೆ ಅಂಥವರನ್ನು 24 ಗಂಟೆಯೊಳಗೆ ಕಚೇರಿಯಿಂದ ಹೊರ ಹಾಕಲಾಗುವುದು. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಕೆಲವು ದೌರ್ಬಲ್ಯಗಳು ವಿರೋಧಿಗಳಿಗೆ ಅಸ್ತ್ರಗಳಾಗುತ್ತವೆ. ಪಕ್ಷದ ಕಚೇರಿಯಲ್ಲಿ ಏನೇ ನಡೆದರೂ ಅದಕ್ಕೆ ನಾನೇ ಹೊಣೆಗಾರನಾಗುತ್ತೇನೆ. ಇದರಿಂದ ಯಾರೊಬ್ಬರು ಲಕ್ಷ್ಮಣ ರೇಖೆ ದಾಟಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.   ಕೆಲ ದಿನಗಳ ಹಿಂದೆ ಮಾಹಿತಿ ಸೋರಿಕೆ ಆರೋಪದ ಮೇಲೆ ಕಂಪ್ಯೂಟರ್ ಟೈಪಿಸ್ಟ್ ಮಲ್ಲಿಕಾರ್ಜುನ್ ಅವರನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದೇ ಸಂಶಯದ ಮೇಲೆ ಕಚೇರಿ ಕಾರ್ಯದರ್ಶಿ ಕೇಶವ್ ಪ್ರಸಾದ್ ಅವರಿಂದ ರಾಜೀನಾಮೆ ಪಡೆಯಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin