ಪಠಾಣ್‍ಕೋಟ್ ಮೇಲೆ ದಾಳಿ : ಮಸೂದ್ ವಿರುದ್ಧ ವಿಶ್ವಸಂಸ್ಥೆಗೆ ಚಾರ್ಜ್‍ಶೀಟ್

azer-01

ನವದೆಹಲಿ, ಅ.14-ಪಠಾಣ್‍ಕೋಟ್‍ನ ಭಾರತೀಯ ವಾಯುಪಡೆ ನೆಲೆ ಮೇಲೆ ಭಯೋತ್ಪಾದಕರಿಂದ ದಾಳಿ ನಡೆಸಿದ ಜೈಷ್-ಇ-ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜಾರ್ ವಿರುದ್ಧ ವಿಶ್ವಸಂಸ್ಥೆಗೆ ಆರೋಪಪಟ್ಟಿ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಸಜ್ಜಾಗಿದ್ದು, ಇದರೊಂದಿಗೆ ಮಸೂದ್‍ನನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲು ಕಾರ್ಯತಂತ್ರವನ್ನು ರೂಪಿಸಿದೆ. ಪಠಾಣ್‍ಕೋಟ್ ಭಯಾನಕ ದಾಳಿಯಲ್ಲಿ ಷಾಮೀಲಾದ ಮಸೂದ್‍ನೊಂದಿಗೆ ಆತನ ಸಹೋದರ ಅಬ್ದುಲ್ ರೌಫ್ ಮತ್ತು ಇನ್ನಿಬ್ಬರು ಭಯೋತ್ಪಾದಕರ ವಿರುದ್ಧವೂ ಚಾರ್ಜ್‍ಶೀಟ್‍ಗಳನ್ನು ಸಲ್ಲಿಸಲು ಎನ್‍ಐಎ ಸಿದ್ದವಾಗಿದೆ.

ಮಸೂದ್ ವಿರುದ್ಧದ ಪ್ರಕರಣಗಳ ಬಗ್ಗೆ ವಿಶ್ವದ ಗಮನ ಸೆಳೆದರು ಹಾಗೂ ಕುಪ್ರಸಿದ್ಧ ಭಯೋತ್ಪಾದಕನ ವಿರುದ್ಧ ದಿಗ್ಬಂಧನ ಹೇರಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮೇಲೆ ಒತ್ತಡ ಹೇರುವುದು ಭಾರತದ ಉದ್ದೇಶವಾಗಿದೆ. ಮಸೂದ್, ಆತನ ಸಹೋದರ ಅಬೈಲ್ ಹಾಗೂ ಪಾಕಿಸ್ತಾನದ ಕಾಶಿಫ್‍ಜಾನ್ ಮತ್ತು ಶಾಹೀದ್ ಲತಿಫ್ ವಿರುದ್ಧ ಶೀಘ್ರ ದೋಷಾರೋಪಪಟ್ಟಿಗಳು ದಾಖಲಾಗಲಿವೆ.

► Follow us on –  Facebook / Twitter  / Google+

Sri Raghav

Admin