ಪದಚ್ಯುತಿ ಕಂಟಕದಿಂದ ಪಾರಾದ ಬ್ರೆಜಿಲ್ ಅಧ್ಯಕ್ಷ ಟೇಮರ್

Michel-Temer

ಬ್ರೆಸಿಲಿಯಾ, ಜೂ.10-ಚುನಾವಣೆಗಳಲ್ಲಿ ನಡೆದಿದೆ ಎನ್ನಲಾದ ಭಾರೀ ಭ್ರಷ್ಟಚಾರ ಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈಕಲ್ ಟೇಮರ್ ಅವರನ್ನು ಪದಚ್ಯುತಗೊಳಿಸಲು ಬ್ರೆಜಿಲ್ ಚುನಾವಣಾ ನ್ಯಾಯಾಲಯ ಮತದಾನದ ಮೂಲಕ ನಿರಾಕರಿಸಿದೆ. ತಮ್ಮ ಪದವಿಗೆ ಎದುರಾಗಿದ್ದ ದೊಡ್ಡ ಕಂಟಕವೊಂದರಿಂದ ಅಧ್ಯಕ್ಷರು ಪರಾದಂತಾಗಿದೆ.   2014ರಲ್ಲಿ ಟೇಮರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಅವರ ಆಯ್ಕೆಯನ್ನು ಅಕ್ರಮವೆಂದು ಘೋಷಿಸಿ ರದ್ದುಗೊಳಿಸಬೇಕೆಂಬ ಮನವಿಗಳ ವಿಚಾರಣೆ ನಡೆಸುತ್ತಿದ್ದ ಸವೋಚ್ಛ ಚುನಾವಣಾ ನ್ಯಾಯಮಂಡಳಿ(ಸುಪ್ರೀಂ ಎಲೆಕ್ಟ್ರೋಲ್ ಟ್ರಿಬ್ಯುನಲ್-ಟಿಎಸ್‍ಇ) ನಿನ್ನೆ 4-3 ಮತಗಳಿಂದ ಅಧ್ಯಕ್ಷರನ್ನು ಖುಲಾಸೆಗೊಳಿಸಿತು.ಈ ತೀರ್ಪಿನ ಒಂದು ಹಂತದಲ್ಲಿ ಏಳು ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯ ತಲೆದೋರಿತು. ಟಿಎಸ್‍ಇ ಹಿರಿಯ ನ್ಯಾಯಾಧೀಶ ಹರ್ಮನ್ ಬೆಂಜಮಿನ್ ಟೇಮರ್ ಪದಚ್ಯುತಿಗೆ ಒಲವು ತೋರಿದರು. 2014ರ ಚುನಾವಣೆಯಲ್ಲಿ ಬ್ರೆಜಿಲ್ ಕಾರ್ಪೊರೇಟ್  ಕಂಪನಿಗಳಿಂದ ಭಾರೀ ಪ್ರಮಾಣದ ಅಘೋಷಿತ ದೇಣಿಗೆ ಮತ್ತು ಲಂಚಗಳು ಸಂದಾಯವಾಗಿದೆ. ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲು ಇದು ಸಮರ್ಪಕವಾಗಿದೆ ಎಂದರು. ಈ ವಿಷಯದಲ್ಲಿ ಸುದೀರ್ಘ ಚರ್ಚೆ ನಡೆದು ಪರ ಮತ್ತು ವಿರೋಧಿ ನಿಲುವು ವ್ಯಕ್ತವಾದಾಗ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಏಳು ನ್ಯಾಯಾಧೀಶರಲ್ಲಿ ಆರು ಮಂದಿ ಮತ ಚಲಾಯಿಸಿದಾಗ 3-3ರಲ್ಲಿ ಸಮಬಲ ಫಲಿತಾಂಶ ಲಭಿಸಿತು ಅಂತಿಮವಾಗಿ ನ್ಯಾಯಮಂಡಳಿ ಅಧ್ಯಕ್ಷ ಗಿಲ್ಮರ್ ಮೆಂಡೆಸ್ ಚಲಾಯಿಸಿದ ನಿರ್ಣಾಯಕ ಮತದಲ್ಲಿ ಬ್ರೆಜಿಲ್ ಅಧ್ಯಕ್ಷರು ಪದಚ್ಯುತಿಯಿಂದ ಪಾರಾದರು.ಗಂಭೀರ ಆರೋಪಿಗಳು ಇದ್ದರೂ, ಅಧ್ಯಕ್ಷರ ಪರವಾಗಿ ಜನಾದೇಶ ಲಭಿಸಿದೆ. ಒಂದು ಗಣರಾಜ್ಯದ ಮುಖ್ಯಸ್ಥರನ್ನು ಪ್ರತಿಗಂಟೆಗೂ ಬದಲಿಸಲು ಸಾಧ್ಯವಿಲ್ಲ. ರಾಷ್ಟ್ರವು ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಂದರ್ಭದಲ್ಲಿ ಅಧ್ಯಕ್ಷರ ಪದಚ್ಯುತಿ ಸಲ್ಲದು. ಅವರ ಮೇಲಿನ ಲಂಚರುಷುವತ್ತುಗಳ ಆರೋಪ ಬೇರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಯುತ್ತಿದೆ. ಆದರನ್ನು ಅಧಿಕಾರದಿಂದ ಕೆಳಗಿಳಿಸಬಾರದು ಎಂಬುದಷ್ಟೇ ಈ ನ್ಯಾಯಾಲಯದ ತೀರ್ಪು ಎಂದು ಅವರು ಘೋಷಿಸಿದರು. ಈ ತೀರ್ಪಿನಿಂದ ವಿರೋಧಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಭಟನೆ ಭುಗಿಲೆದ್ದಿದೆ.  ಈ ಹಿಂದೆ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಆಗಿನ ಅಧ್ಯಕ್ಷೆ ಗಿಲ್ಮಾ ರೌಸ್ಸೆಫ್ ಅಧಿಕಾರ ಕಳೆದುಕೊಂಡ ನಂತರ ಉಪಾಧ್ಯಕ್ಷರಾಗಿದ್ದ ಟೇಮರ್ ಅಧ್ಯಕ್ಷರಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin