ಪರಾರಿಯಾಗಿರುವ ಕೈದಿಗಾಗಿ ವ್ಯಾಪಕ ಶೋಧ

jail

ಬೆಂಗಳೂರು, ಸೆ.1- ಪರಪ್ಪನ ಕಾರಾಗೃಹದಿಂದ ತರಕಾರಿ ವ್ಯಾನಿನಲ್ಲಿ ಪರಾರಿಯಾಗಿರುವ ಕೈದಿಗಾಗಿ ಆಗ್ನೇಯ ವಿಭಾಗದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.  ಆಗ್ನೇಯ ವಿಭಾಗದ ಡಿಸಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಪರಾರಿಯಾಗಿರುವ ಕೈದಿ ಡೇವಿಡ್‌ನ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ತಂಡ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಈತನ ಸಹೋದರನಿಂದ ಕೆಲವು ಮಾಹಿತಿಗಳನ್ನು ಪಡೆದು ಕಾರ್ಯಾಚರಣೆ ಕೈಗೊಂಡಿದೆ.   ಒಂದು ತಂಡ ಜೈಲಿನ ಸುತ್ತಮುತ್ತ ಕಾರ್ಯಾಚರಣೆ ಕೈಗೊಂಡಿದ್ದರೆ, ಮತ್ತೊಂದು ತಂಡ ಕೈದಿ ಡೇವಿಡ್‌ನ ಊರು, ನೆಂಟರಿಷ್ಟರ ಪತ್ತೆ ಹಚ್ಚಿ ತನಿಖೆ ಚುರುಕುಗೊಳಿಸಿದೆ. ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ಆರೋಪಿ ಡೇವಿಡ್ ಮಂಗಳವಾರ ಬೆಳಗ್ಗೆ ಕಾರಾಗೃಹಕ್ಕೆ ತರಕಾರಿಗಳನ್ನು ತಂದಿದ್ದ ವಾಹನ ಹತ್ತಿ ಚೀಲದಲ್ಲಿ ಅಡಗಿ ಕುಳಿತು ಪರಾರಿಯಾಗಿದ್ದನು.

► Follow us on –  Facebook / Twitter  / Google+

 

Sri Raghav

Admin