ಪರಿಸರ ಧಾರಣ ಸಾಮಥ್ರ್ಯ ಪುಸ್ತಕ ಲೋಕಾರ್ಪಣೆ

Spread the love

ಶಿರಸಿ,ಫೆ.10- ನೈಸರ್ಗಿಕ ಸಂಪತ್ತು ಬೃಹತ್ ಯೋಜನೆಗಳಿಂದ ಆಪತ್ತಿಗೆ ಒಳಗಾದ ಸಂದರ್ಭದಲ್ಲಿ ಉ.ಕ. ಜಿಲ್ಲೆ ಪರಿಸರ ಧಾರಣಾ ಸಾಮಥ್ರ್ಯದ ಅಧ್ಯಯನ ನಡೆಸಬೇಕು ಎಂಬ ಬೇಡಿಕೆ ಹುಟ್ಟಿಕೊಂಡಿತು. ಕೈಗಾ, ಶರಾವತಿ ಟೇಲ್‍ರೇಸ್ ಚಳುವಳಿ ಸಂದರ್ಭದಲ್ಲಿ 1985ರಿಂದ 1990ರ ಹೊತ್ತಿಗೆ, ಬೇಡ್ತಿ ವರದಾ ನದೀ ಜೋಡಣೆ ಯೋಜನೆ 2001 -02ರಲ್ಲಿ ಪ್ರಸ್ತಾಪ ಆದಾಗ ಈ ಅಹವಾಲು ಇನ್ನಷ್ಟು ವ್ಯಾಪಕವಾಯಿತು. 2008ರಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ರಚನೆ ಆದಾಗ ಸರ್ಕಾರದ ಮಟ್ಟದಲ್ಲಿ ಧಾರಣಾ ಸಾವ್ಮಥ್ರ್ಯ ಅಧ್ಯಯನಕ್ಕೆ ಬಲ ಬಂತು. ಆದೇಶ ಸಿಕ್ಕಿತು. 2009ರಲ್ಲಿ ಸೋಂದಾ ಸ್ವರ್ಣವಲ್ಲಿ ಮಠಕ್ಕೆ ಅಂದಿನ ಮುಖ್ಯಮಂತ್ರಿ ಆಗಮಿಸಿದಾಗ ಈ ಬಗ್ಗೆ ಆಶ್ವಾಸನೆ ನೀಡಿದರು. 2010ರಲ್ಲಿ ವಿಧಾನಸೌಧದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ ತಂಡ ಅಧ್ಯಯನದ ಪ್ರಸ್ತಾವನೆ ಸಲ್ಲಿಸಿತು. ಶಿರಸಿ, ಬೆಂಗಳೂರಿನಲ್ಲಿ ಆರಂಭಿಕ ಸಂವಾದ ಏರ್ಪಡಿಸಲಾಗಿತ್ತು. 2012ರಲ್ಲಿ ಮಧ್ಯಂತರ ವರದಿಯನ್ನು ವಿಜ್ಞಾನಿಗಳು ಸಲ್ಲಿಸಿದರು. 2013ರಲ್ಲಿ ಅಂತಿಮಪೂರ್ವ ವರದಿ, 2014ರಲ್ಲಿ ಅಂತಿಮ ವರದಿಯನ್ನು ಡಾ. ಟಿ.ವಿ. ರಾಮಚಂದ್ರ ತಂಡ ಸರಕಾರಕ್ಕೆ ಸಲ್ಲಿಸಿತು.

ಪರಿಸರ ವಿಜ್ಞಾನಿಗಳು, ಜನಪ್ರತಿನಿಧಿಗಳ ಜೊತೆ ಅಧ್ಯಯನ ತಂಡ ಚರ್ಚೆ ನಡೆಸಿತು. ಇಡೀ ದೇಶದಲ್ಲಿ ಈವರೆಗೆ ಒಂದು ಜಿಲ್ಲೆಯ ಪರಿಸರ ಧಾರಣಾ ಸಾಮಥ್ರ್ಯದ ಅಧ್ಯಯನ ನಡೆದಿರಲಿಲ್ಲ. ಉ.ಕ. ಜಿಲ್ಲೆಯಲ್ಲಿ ಇದಕ್ಕೆ ಅವಕಾಶ ಸಿಕ್ಕಿದೆ. ಕೇಂದ್ರ ಪರಿಸರ ಮಂತ್ರಾಲಯ ಕೂಡಾ ಉ.ಕ ಧಾರಣಾ ಸಾಮಥ್ರ್ಯದ ವರದಿ ಬಗ್ಗೆ ಶ್ಲಾಘನೆ ಮಾಡಿದೆ. ಗ್ರಾಮ ಜೀವ ವೈವಿಧ್ಯ ದಾಖಲಾತಿ ಕಾರ್ಯವನ್ನು 300ಹಳ್ಳಿಗಳಲ್ಲಿ ಈ ಅಧ್ಯಯನ ಸಂದರ್ಭದಲ್ಲಿ ನಡೆಸಲಾಗಿತ್ತು. ಅರಣ್ಯ ಕಾಲೇಜಿನಲ್ಲಿ ಎಂಇಎಸ್ ಕಾಲೇಜಿನಲ್ಲಿ ವರದಿ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಲಾಗಿದೆ. ಉ.ಕ. ಜಿಲ್ಲೆಯ ನದೀ ಕಣಿವೆಗಳು, ಗಣಿಗಾರಿಕೆ, ಆಣೆಕಟ್ಟು, ಭೂಕುಸಿತ ವಿಷಯಗಳು, ಬೃಹತ್ ಯೋಜನೆಗಳು ಅರಣ್ಯನಾಶ, ಕೃಷಿ, ಮೀನುಗಾರಿಕೆ, ಅರಣ್ಯಗಳ ಪಾರಿಸಾರಿಕ ಮೌಲ್ಯ  ಕುರಿತು ಮಾಹಿತಿ ಈ ಪುಸ್ತಕದಲ್ಲಿದೆ. ಅರಣ್ಯಗಳ ಸುಸ್ಥಿರ ಅಭಿವೃದ್ಧಿ ಯೋಜನೆಯ ಮಾದರಿ ಇಲ್ಲಿದೆ. ಕರಾವಳಿ, ಅರೆ ಬಯಲು ಸೀಮೆ, ಮಲೆನಾಡು ಪರಿಸ್ಥಿತಿ ಮುಂತಾದ ಸಂಗತಿಗಳ ಮಾಹಿತಿ, ಅಂಕಿ ಸಂಖ್ಯೆ ವೈಜ್ಞಾನಿಕ  ಪರಿಣಾಮ, ವಿಶ್ಲೇಷಣೆ ಶಿಫಾರಸ್ಸುಗಳು ಪುಸ್ತಕದಲ್ಲಿ ಸಂಗ್ರಹಿತವಾಗಿದೆ.
ವಿದ್ಯಾರ್ಥಿಗಳು, ಶಿಕ್ಷಕರು, ಜನಪ್ರತಿನಿಧಿಗಳು, ಪತ್ರಕರ್ತರು ಹೀಗೆ ಎಲ್ಲರಿಗೆ ಉಪಯುಕ್ತ ಈ ಪುಸ್ತಕ. ಸಮಗ್ರ ವಿವರಕ್ಕೆ ಆಂಗ್ಲ ಭಾಷೆಯಲ್ಲಿ ಇರುವ ಅಧ್ಯಯನ ವರದಿಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರದ ವೆಬ್‍ಸೈಟ್‍ನಿಂದ ಪಡೆಯಬಹುದು. ನಿಸರ್ಗಭರಿತ ಉ.ಕ. ಜಿಲ್ಲೆ ಈಗಾಗಲೇ ಬಹಳಷ್ಟು ನೈಸರ್ಗಿಕ ಸಂಪತ್ತನ್ನು ಕಳೆದುಕೊಂಡಿದೆ. ಇನ್ನಷ್ಟು ಬೃಹತ್ ಅರಣ್ಯ, ಪರಿಸರ ನಾಶೀ ಯೋಜನೆಗಳನ್ನು ಸಹಿಸುವ ಸಾಮಥ್ರ್ಯ ಉ.ಕ. ಜಿಲ್ಲೆಗೆ ಇಲ್ಲ ಎಂದು ಧಾರಣಾ ಸಾಮಥ್ರ್ಯ ವರದಿ ತಜ್ಞ ಅಭಿಪ್ರಾಯ ನೀಡಿದೆ. ವಿಕೇಂದ್ರೀಕೃತ ಸುಸ್ಥಿರ ಅಭಿವೃದ್ಧಿ ಯೋಜನೆಗಳೆ ಸಾಧು ಎಂದು ವಿಜ್ಞಾನ ಸಂಸ್ಥೆ ವರದಿ ಹೇಳಿದೆ.

ಅಧ್ಯಯನದಲ್ಲಿ ಡಾ. ರಾಮಚಂದ್ರ ಅವರ ಜೊತೆ ಡಾ. ಸುಭಾಸ ಚಂದ್ರನ್, ಮೇಸ್ತ ಡಾ. ರಾವ್, ಡಾ. ರಾಜಶ್ರೀ ಇನ್ನೂ ಹಲವರು ತಂಡದಲ್ಲಿದ್ದಾರೆ. ಸಂಕ್ಷಿಪ್ತ ಕನ್ನಡ ಅನುವಾದವನ್ನು ಇದೀಗ 180 ಪುಟಗಳಲ್ಲಿ ಬರಹಗಾರ ಪರಿಸರ ಕಾರ್ಯಕರ್ತ ಶ್ರೀ ನರೇಂದ್ರ ಹೊಂಡಗಾಶಿ ಮಾಡಿಕೊಟ್ಟಿದ್ದಾರೆ. ಶ್ರೀ ಸ್ವರ್ಣವಲ್ಲೀ ಭಗವತ್ಪಾದ ಪ್ರಕಾಶನದಿಂದ ಪ್ರಕಟಿಸಲಾಗಿದೆ. ಪೂಜ್ಯ ಸ್ವರ್ಣವಲ್ಲೀ ಶ್ರೀಗಳೇ ಅಧ್ಯಕ್ಷರಾಗಿರುವ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಪುಸ್ತಕ ಪ್ರಕಟಣೆಗೆ ನೆರವು ನೀಡಿದೆ. ಫೆ. 12ರ ಮಧ್ಯಾಹ್ನ 3 ಘಂಟೆಗೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ರಜತಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಧಾರಣಾ ಸಾಮಥ್ರ್ಯ ಪುಸ್ತಕ ಬಿಡುಗಡೆ ಆಗಲಿದೆ. ಪರಿಸರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪರಿಸರಾಸಕ್ತರು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin