ಪರ ರಾಜ್ಯಗಳ ಪಾಲಾಗುತ್ತಿರುವ ಅನ್ನಭಾಗ್ಯ ಅಕ್ಕಿ, ಕೊಳ್ಳಲು ಮುಗಿಬಿದ್ದ ಮಧ್ಯವರ್ತಿಗಳು

Spread the love

Annabhagya--01

ಬೆಂಗಳೂರು, ಏ.19– ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ನೀಡುತ್ತಿರುವ ಅಕ್ಕಿ ಅನ್ಯ ರಾಜ್ಯಗಳ ಪಾಲಾಗುತ್ತಿದೆ.  ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಫಲಾನುಭವಿಗಳಿಂದ ಅಕ್ಕಿಗಳನ್ನು ಖರೀದಿಸಲೆಂದೇ ಮಧ್ಯವರ್ತಿಗಳು ರಾಜ್ಯಕ್ಕೆ ದಾಂಗುಡಿ ಇಟ್ಟಿದ್ದಾರೆ.  ಬಹುತೇಕ ಗಡಿ ಭಾಗಗಳ ಜಿಲ್ಲೆಗಳಲ್ಲಿ ಅಕ್ಕಿ ಖರೀದಿ ಮಾಡುವುದಕ್ಕಾಗಿಯೇ ಫಲಾನುಭವಿಗಳ ಸೋಗಿನಲ್ಲೇ ಮಧ್ಯವರ್ತಿಗಳು ಆಗಮಿಸಿದ್ದು, ಈ ಕೆಲಸಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಅಕ್ಕಿ ಗಿರಣಿ ಮಾಲೀಕರು ಕೂಡ ಕೈ ಜೋಡಿಸಿದ್ದಾರೆ.ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‍ನಲ್ಲಿ ಪ್ರತಿಯೊಬ್ಬ ಕುಟುಂಬದ ಸದಸ್ಯರಿಗೆ 5 ಕೆ.ಜಿಗೆ ಬದಲಾಗಿ 7 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದ್ದರು.
ರಾಜ್ಯದಲ್ಲಿ ಯಾವೊಬ್ಬ ಬಡವರು ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕಾಗಿಯೇ ಸರ್ಕಾರ ಫಲಾನುಭವಿಗಳಿಗೆ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು ಏರಿಕೆ ಮಾಡಿದ್ದರು. ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಫಲಾನುಭವಿಗಳು ಹಣದ ಆಸೆಗಾಗಿ ಅಕ್ಕಿಯನ್ನೇ ಮಾರಾಟ ಮಾಡುತ್ತಿದ್ದಾರೆ.

ಬೆಳಗಾವಿ, ಕಲ್ಬುರ್ಗಿ, ಯಾದಗೀರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಈ ವ್ಯವಹಾರ ಸದ್ದಿಲ್ಲದೆ ನಡೆಯುತ್ತದೆ.
ಪ್ರತಿ ತಿಂಗಳು ಕುಟುಂಬದ ಒಬ್ಬ ಸದಸ್ಯರಿಗೆ ಅನ್ಯ ಭಾಗ್ಯ ಯೋಜನೆಯಡಿ 7 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಸರ್ಕಾರ ಇದನ್ನು ಉಚಿತವಾಗಿ ನೀಡುತ್ತದೆ. ಒಂದು ಕುಟುಂಬದಲ್ಲಿ ಐದರಿಂದ 10 ಮಂದಿ ಸದಸ್ಯರಿದ್ದರೆ ಅಂತಹವರಿಗೆ 35ರಿಂದ 70 ಕೆ.ಜಿ. ಅಕ್ಕಿ ಸಿಗುತ್ತದೆ. ಉಚಿತವಾಗಿ ಪಡೆಯುವ ಅಕ್ಕಿಯನ್ನು ಫಲಾನುಭವಿಗಳು ಮಧ್ಯವರ್ತಿಗಳಿಗೆ 8 ರಿಂದ 10 ರೂ.ಗೆ ಮಾರಾಟ ಮಾಡಿಕೊಳ್ಳುತ್ತಾರೆ. ಈ ಅಕ್ಕಿಯನ್ನು ಹೊರ ರಾಜ್ಯದವರು ಕೊಂಡು ಅಲ್ಲಿ ಪಾಲಿಶ್ ಮಾಡಿ ದುಬಾರಿ ದರದಲ್ಲಿ ಮಾರಾಟ ಮಾಡುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin