ಪಳನಿಸ್ವಾಮಿಗೆ ಬಹುಮತದ ಅಗ್ನಿ ಪರೀಕ್ಷೆ

Palaniswamy--01

ಚೆನ್ನೈ, ಫೆ.17– ಸಿಎಂ ಪಟ್ಟ ಅಲಂಕರಿಸಿದ್ದರೂ ನಾಳೆ ನಡೆಯಲಿರುವ ವಿಶ್ವಾಸಮತದಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ. ಈಗಾಗಲೇ ಪನ್ನೀರ್ ಸೆಲ್ವಂ ವಿರುದ್ಧ ತೊಡೆತಟ್ಟಿ ಗೆದ್ದಿರುವ ಶಶಿಕಲಾ ಬಣ ಮೊದಲ ಹಂತದಲ್ಲಿ ಬೀಗುತ್ತಿದ್ದರೂ ಸದನದಲ್ಲಿ ಬಹುಮತ ಸಾಬೀತುಪಡಿಸುವವರೆಗೂ ಆತಂಕ ಮಾತ್ರ ದೂರವಾಗಿಲ್ಲ. ಒಟ್ಟಾರೆ 135 ಶಾಸಕರ ಬಲ ಹೊಂದಿರುವ ಎಐಎಡಿಎಂಕೆಯಲ್ಲಿ 10 ರಿಂದ 12 ಮಂದಿ ಪನ್ನೀರ್ ಸೆಲ್ವಂ ಕಡೆ ಒಲವು ತೋರಿರುವುದು ಮತ್ತು ಪ್ರತಿಪಕ್ಷವಾಗಿರುವ ಡಿಎಂಕೆ, ಕಾಂಗ್ರೆಸ್ ಮತ್ತು ಒಬ್ಬ ಮುಸ್ಲಿಂ ಲೀಗ್ ಸದಸ್ಯ ಸರ್ಕಾರದ ವಿರುದ್ಧ ಮತ ಚಲಾಯಿಸುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.

palanisamy-01

ಇದರ ನಡುವೆ 135ರಲ್ಲಿ 12 ಮಂದಿ ಹೋದರೂ 123 ಶಾಸಕರ ಬಲ ತಮಗಿರುವುದಾಗಿ ಪಳನಿಸ್ವಾಮಿ ಹೇಳಿದ್ದಾರೆ. ಆದರೂ ಕೊನೆ ಕ್ಷಣದಲ್ಲಿ ಬದಲಾವಣೆಯಾಗುವ ಆತಂಕವಿರುವುದರಿಂದ ಚೆನ್ನೈನಲ್ಲಿ ಎಲ್ಲ ಶಾಸಕರನ್ನೂ ಒಗ್ಗಟ್ಟಾಗಿ ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರ ನಡೆಸಿದ್ದಾರೆ.   ಇಡೀ ದಿನ ರಾಜ್ಯದ ರಾಜಕೀಯ ಪಕ್ಷಗಳು ನಾಳೆ ಸದನದಲ್ಲಿ ತಳೆಯಬೇಕಾದ ನಿಲುವಿನ ಬಗ್ಗೆ ಸಾಕಷ್ಟು ಸಭೆಗಳನ್ನು ನಡೆಸುತ್ತಿದ್ದು, ಜನರಲ್ಲಿ ಇದು ಸಾಕಷ್ಟು ಕುತೂಹಲ ಕೆರಳಿಸಿದೆ.  ಪಳನಿಸ್ವಾಮಿ ವಿಶ್ವಾಸಮತ ಗಳಿಸುತ್ತಾರೆ ಎಂದು ಎಐಎಡಿಎಂಕೆ ನಾಯಕರು ಹೇಳುತ್ತಿದ್ದಾರೆ. ಅದು ಮೇಲ್ನೋಟಕ್ಕೆ ಹೌದು ಎಂದಾದರೂ ಪ್ರಕ್ರಿಯೆ ಪೂರ್ಣಗೊಳ್ಳುವ ನಂತರವೇ ಎಐಎಡಿಎಂಕೆ ಶಾಸಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ.

ಶಶಿ ಸಹೋದರರ ಉಚ್ಛಾಟನೆ:

ಈ ಮಧ್ಯೆ ಎಐಎಡಿಎಂಕೆ ಸ್ಥಾಯಿ ಅಧ್ಯಕ್ಷ ಇ.ಮಧುಸೂದನ್ ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಮತ್ತು ಮೊನ್ನೆಯಷ್ಟೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅವರ ಸಹೋದರರಾದ ದಿನಕರನ್ ಮತ್ತು ಡಾ.ವೆಂಕಟೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದ್ದಾರೆ.

ಸರ್ಕಾರದ ವಿರುದ್ಧ ಮತ : 
ಜೈಲು ಪಾಲಾಗಿರುವ ಶಶಿಕಲಾ ನಟರಾಜನ್ ಬಣ ಮೇಲುಗೈ ಸಾಧಿಸಿದ ಹಿನ್ನೆಲೆ ಯಲ್ಲಿ ಮುಂದಿನ ಕಾರ್ಯತಂತ್ರ ರೂಪಿಸಲು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಇಂದು ತಮ್ಮ ಬೆಂಬಲಿಗ ಶಾಸಕರು ಮತ್ತು ಮುಖಂಡ ರೊಂದಿಗೆ ಮಹತ್ವದ ಸಭೆ ನಡೆಸಿದರು.   ಪಳನಿಸ್ವಾಮಿ ನಾಳೆ ವಿಧಾನಸಭೆಯಲ್ಲಿ ತಮಗಿರುವ ಬಹುಮತ ಸಾಬೀತುಪಡಿಸಲು ಸಜ್ಜಾ ಗಿದ್ದಾರೆ. ಜೈಲು ಪಾಲಾಗುವುದಕ್ಕೆ ಮುನ್ನವೇ ಸೆಲ್ವಂ ಮತ್ತು ಅವರ ಬೆಂಬಲಿಗರನ್ನು ಶಶಿಕಲಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದ್ದಾರೆ. ಈ ಬೆಳವಣಿಗೆ ನಂತರ ಸೆಲ್ವಂಗೆ ಅಸ್ತಿತ್ವದ ಸಮಸ್ಯೆ ಎದುರಾಗಿದೆ. ಅಲ್ಲದೇ ಮುಂದೇನು ಮಾಡಬೇಕೆಂಬ ದೊಡ್ಡ ಪ್ರಶ್ನೆಯೂ ಉದ್ಭವಿಸಿದೆ.

ಚೆನ್ನೈನ ಗ್ರೀನ್ ವೇಸ್‍ನಲ್ಲಿರುವ ತಮ್ಮ ನಿವಾಸದಲ್ಲಿ 10 ಶಾಸಕರು ಮತ್ತು ತಮ್ಮ ಪರವಾಗಿರುವ ಮುಖಂಡರೊಂದಿಗೆ ಮುಂದಿನ ಕಾರ್ಯತಂತ್ರ ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪನ್ನೀರ್ ಸೆಲ್ವಂ ಸಮಾಲೋಚನೆ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin