ಪಾಕಿಸ್ತಾನದಲ್ಲಿ ಇಬ್ಬರು ಕುಖ್ಯಾತ ತಾಲಿಬಾನ್ ಉಗ್ರರಿಗೆ ನೇಣು
ಇಸ್ಲಾಮಾಬಾದ್, ಏ.12- ಪಾಕಿಸ್ತಾನದಲ್ಲಿ ಇಬ್ಬರು ಕುಖ್ಯಾತ ತಾಲಿಬಾನ್ ಉಗ್ರರನ್ನು ಗಲ್ಲಿಗೇರಿಸಲಾಗಿದೆ. ಭಯೋತ್ಪಾದನೆಗೆ ಸಂಬಂಧಪಟ್ಟ ಅಪರಾಧಗಳಿಗಾಗಿ ವಿವಾದಾತ್ಮಕ ಸೇನಾ ನ್ಯಾಯಾಲಯಗಳು ಈ ಇಬ್ಬರಿಗೆ ಮರಣದಂಡನೆ ಶಿಕ್ಷೆ ನೀಡಿತ್ತು. ಮಾನವ ಹಕ್ಕುಗಳ ಸಂಘಟನೆಗಳ ತೀವ್ರ ಪ್ರತಿಭಟನೆಗಳನ್ನು ನಿರ್ಲಕ್ಷಿಸಿ ಎರಡು ವರ್ಷಗಳ ಬಳಿಕ ಈ ಭಯೋತ್ಪಾದಕರನ್ನು ಪಂಜಾಬ್ ಪ್ರಾಂತ್ಯದ ಅತಿ ಭದ್ರತೆಯ ಕಾರಾಗೃಹದಲ್ಲಿ ನೇಣುಗಂಬಕ್ಕೇರಿಸಲಾಯಿತು. ಉಗ್ರರಿಗೆ ಫಾಸಿ ವಿಧಿಸಿರುವ ಬಗ್ಗೆ ಸೇನೆ ತಡರಾತ್ರಿ ಹೇಳಿಕೆ ನೀಡಿದೆ.
ಇವರಿಬ್ಬರು ಕುಖ್ಯಾತ ಭಯೋತ್ಪಾದಕರಾಗಿದ್ದು, ನಾಗರಿಕರ ಕಗ್ಗೊಲೆ, ಸಶಸ್ತ್ರ ಪಡೆಗಳ ಮೇಲೆ ದಾಳಿ ಸೇರಿದಂತೆ ಭಯೋತ್ಪಾದನೆಗೆ ಸಂಬಂಧಪಟ್ಟ ಬರ್ಬರ ಕೃತ್ಯಗಳಲ್ಲಿ ಶಾಮೀಲಾಗಿದ್ದರು ಎಂದು ಸೇನೆ ತಿಳಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >