ಸಾರ್ಕ್ ಸಮಾವೇಶಕ್ಕೆ ಜೇಟ್ಲಿ ಪಾಕಿಸ್ತಾನಕ್ಕೆ ಹೋಗೋದು ಡೌಟ್

S-Arun-Jaitly

ನವದೆಹಲಿ, ಆ.24-ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಸಾರ್ಕ್ ರಾಷ್ಟ್ರ ಹಣಕಾಸು ಸಚಿವರ ಸಮಾವೇಶದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಭಾಗವಹಿಸುವ ಸಾಧ್ಯತೆಗಳಿಲ್ಲ. ರಾಜಕೀಯ ಕಾರಣಗಳಿಂದ ಸಚಿವರು ಪಾಕಿಸ್ತಾನಕ್ಕೆ ತೆರಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.  ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಆ.25 ಮತ್ತು 26ರಂದು ಸಾರ್ಕ್ ದೇಶಗಳ ಹಣಕಾಸು ಸಚಿವರ ಎರಡು ದಿನಗಳ ಸಭೆ ನಡೆಯಲಿದೆ.  ರಾಜಕೀಯ ಕಾರಣಗಳಿಂದ ಹಣಕಾಸು ಸಚಿವರು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆಗಳಿಲ್ಲ. ಕಳೆದ ಬಾರಿ ಏನಾಯಿತು ಮತ್ತು ಈಗ ಏನಾಗುತ್ತಿದೆ ಎಂಬುದು ನಿಮಗೆಲ್ಲ ತಿಳಿದಿದೆ ಎಂದು ಈ ತಿಂಗಳ ಆರಂಭದಲ್ಲಿ ಗೃಹ ಸಚಿವ ರಾಜ್ನಾಥ್ಸಿಂಗ್ ಅವರ ಇಸ್ಲಾಮಾಬಾದ್ ಭೇಟಿಯನ್ನು ಉಲ್ಲೇಖಿಸಿ ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆ ನಡೆದ ಸಾರ್ಕ್ ಗೃಹ ಸಚಿವರ ಸಮಾವೇಶದ ವೇಳೆ ಪಾಕ್ ಗೃಹ ಸಚಿವ ಚೌಧರಿ ನಿಸಾರ್ ಅಲಿ ಅವರ ವರ್ತನೆ ಮತ್ತು ಪಾಕಿಸ್ತಾನದ ಅಧಿಕಾರಿಗಳು ಭಾರತದ ಮಾಧ್ಯಮದ ಮೇಲೆ ದೌರ್ಜನ್ಯ ಎಸಗಿದ ಸಂಗತಿಗಳನ್ನೂ ಸಹ ಮೂಲಗಳು ಉಲ್ಲೇಖಿಸಿವೆ.

► Follow us on –  Facebook / Twitter  / Google+

Sri Raghav

Admin