ಪಾಕಿಸ್ತಾನದ ಲಾಹೋರ್‍ನಲ್ಲಿ ಪೊಲೀಸರ ಗುಂಡಿಗೆ 10 ಉಗ್ರರು ಗುಂಡಿಗೆ ಬಲಿ

Lahorte--01

ಲಾಹೋರ್, ಏ.8- ಪಾಕಿಸ್ತಾನದ ಲಾಹೋರ್‍ನಲ್ಲಿ ಇಂದು ಮುಂಜಾನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮಾತ್-ಉರ್-ಅರಾರ್ (ಜೆಯುಎ) ಹಾಗೂ ತೇಹ್‍ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆಗಳ 10 ಕುಖ್ಯಾತ ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಲಾಹೋರ್‍ನ ಮಾಲ್ ರೋಡ್‍ನಲ್ಲಿ ಆರು ಪೊಲೀಸರೂ ಸೇರಿದಂತೆ 15 ಮಂದಿ ಬಲಿಯಾದ ಆತ್ಮಾಹುತಿ ದಾಳಿಯಲ್ಲಿ ಈ ಉಗ್ರರು ಭಾಗಿಗಳಾಗಿದ್ದರು.

ಲಾಹೋರ್ ದಾಳಿ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಅಡಗಿಸಿಟ್ಟಿದ್ದ ಸ್ಥಳವನ್ನು ಗುರುತಿಸಲು ಇಂದು ಮುಂಜಾನೆ ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ಇಲಾಖೆ(ಸಿಟಿಡಿ) ಅಧಿಕಾರಗಳ ತಂಡವು ಮನವಾನ್ ಪ್ರದೇಶದ ಸ್ಥಳಕ್ಕೆ ಭಯೋತ್ಪಾದಕರ ಬೆಂಬಲಕ್ಕೆ ನಿಂತ ಸಂಧಾನಕಾರರಾದ ಅನ್ವರುಲ್ ಹಕ್, ಇರ್ಫಾನ್ ಮತ್ತು ಇಮಾಮ್ ಶಾ ಅವರನ್ನು ಕರೆದೊಯ್ಯುತ್ತಿದ್ದಾಗ ಅವರ ಸಹಚರರು ಜಾಲೀಸರ ಮೇಲೆ ಹಠಾತ್ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಿಟಿಡಿ ತಂಡವು ಕ್ಷಿಪ್ರ ಪ್ರತಿದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆಯಿತು. ಈ ಎನ್‍ಕೌಂಟರ್‍ನಲ್ಲಿ 10 ಭಯೋತ್ಪಾದಕರು ಹತರಾದರು ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎನ್‍ಕೌಂಟರ್‍ನಲ್ಲಿ ಮೂವರು ಸಂಧಾನಕಾರರೂ ಸಹ ಹತರಾಗಿದ್ದಾರೆ. ಜಾಲೀಸ್ ತಂಡದ ಮೇಲೆ ದಾಳಿ ನಡೆಸಿದ ಏಳು ಜನರಲ್ಲಿ ಇಬ್ಬರನ್ನು ಅತ್ತೌರ್ ರೆಹಮಾನ್ ಮತ್ತು ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಹತರಾದ ಉಗ್ರರಿಂದ ಹ್ಯಾಂಡ್ ಗ್ರೆನೇಡ್‍ಗಳು, ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದ ಪಂಜಾಬ್ ವಿಧಾನಸಭೆ ಹೊರಗೆ ರ್ಯಾಲಿ ನಡೆಯುತ್ತಿದ್ದ ವೇಳೆ ಫೆ.13ರಂದು ಜೆಯುಎ ಮಾನವ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡು ಇಬ್ಬರು ಉನ್ನತ ಜಾಲೀಸ್ ಆಧಿಕಾರಿಗಳೂ ಸೇರಿದಂತೆ 15 ಜನರನ್ನು ಹತ್ಯೆಗೈದಿದ್ದ. ಈ ಆತ್ಮಾಹುತಿ ದಾಳಿಯಲ್ಲಿ 72ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin