ಪಾಕಿಸ್ತಾನಿಯರಿಂದಲೇ ದೇಶಕ್ಕೆ ಮತ್ತು ಇಸ್ಲಾಂಗೆ ಕೆಟ್ಟ ಹೆಸರು : ಮಲಾಲಾ ವಿಷಾದ

Spread the love

Malala--01

ನವದೆಹಲಿ, ಏ.16-ಪಾಕಿಸ್ತಾನಿಯರ ಕೆಲವು ವರ್ತನೆಗಳು ದೇಶಕ್ಕೆ ಮತ್ತು ಇಸ್ಲಾಂಗೆ ಕೆಟ್ಟ ಹೆಸರು ತರುತ್ತಿವೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕøತೆ ಮಲಾಲಾ ಯೂಸುಫ್ ಝೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ದೇವನಿಂದನೆ ಆರೋಪಕ್ಕಾಗಿ ವಿದ್ಯಾರ್ಥಿಯೊಬ್ಬನನ್ನು ಜನರ ಗುಂಪೊಂದು ಥಳಿಸಿ ಕೊಂದ ಘಟನೆ ಕುರಿತು ವಿಷಾದದಿಂದ ಪ್ರತಿಕ್ರಿಯಿಸಿರುವ ಅವರು ವಿಡಿಯೋ ಸಂದೇಶದಲ್ಲಿ ಪಾಕಿಸ್ತಾನಿಯರ ವರ್ತನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.   ಜಗತ್ತಿನ ಮುಂದೆ ಪಾಕಿಸ್ತಾನಕ್ಕೆ ಮತ್ತು ಇಸ್ಲಾಂಗೆ ಕೆಟ್ಟ ಹೆಸರು ಬರಲು ಇಂಥ ಘಟನೆಗಳು ಕಾರಣವಾಗುತ್ತಿವೆ.


ದೇಶಕ್ಕೆ ಮತ್ತು ಧರ್ಮದ ವಿರುದ್ಧವೇ ಪಾಕಿಸ್ತಾನಿಯರು ವರ್ತಿಸುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಮಲಾಲಾ ತಿಳಿಸಿದ್ದಾರೆ. ಮಶಾಲ್ ಖಾನ್ ಎಂಬ 23 ವರ್ಷದ ವಿದ್ಯಾರ್ಥಿಯನ್ನು ದೈವ ನಿಂದಕನೆಂದು ಆರೋಪಿಸಿ ಜನರ ಗುಂಪೊಂದು ಮೊನ್ನೆ ಕೊಂದು ಹಾಕಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin