ಪಾಕ್ ಗೆ ಪ್ರತ್ಯುತ್ತರ : ಕೇಲ್ ಸೆಕ್ಟರ್ನಲ್ಲಿ 8 ಪಾಕ್ ಸೈನಿಕರ ಹತ್ಯೆಗೈದ ಬಿಎಸ್ಎಫ್

Pakistyan-02

ಜಮ್ಮು.ನ.23 : ಮೂವರು ಭಾರತೀಯ ಯೋಧರನ್ನುಕೊಂದು ಅದರಲ್ಲಿ ಒಬ್ಬ ಯೋಧನ ದೇಹವನ್ನು ತುಂಡುತುಂಡಾಗಿ ಕತ್ತರಿಸಿ, ಶಿರಚ್ಛೇಧ ಮಾಡಿ ಕ್ರೌರ್ಯ ಮೆರೆದಿದ್ದ ಪಾಕ್ ವಿರುದ್ದ ಗಡಿಯಲ್ಲಿ ಭಾರತೀಯ ಸೈನಿಕರು ಇಂದು ಪ್ರತ್ಯುತ್ತರ ಕೊಟ್ಟಿದ್ದು 8 ಪಾಕ್ ಸೈನಿಕರನ್ನ ಹತ್ಯೆಗೈದಿದ್ದಾರೆ. ದಿನದಿಂದ ದಿನಕ್ಕೆ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗುತ್ತಿದ್ದು ನಿರಂತರ ಗುಂಡಿನ ಚಕಮಕಿ ನಡೆಯುತ್ತದೆ.

ಗಡಿ ರೇಖೆ ಉದ್ದಕ್ಕೂ ಪದೇ ಪದೇ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕ್ ಇಂದೂ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿರುವ ಪೂಂಛ್, ರಾಜೌರಿ, ಕೇಲ್, ನೌಶೇರಾ ಹಾಗೂ ಭಿಂಬೇರ್ ಪ್ರದೇಶಗಳಲ್ಲಿ ಬೆಳಗ್ಗೆ ಅಪ್ರಚೋದಿತ ಶೆಲ್ ಬಳಸಿ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಯೋಧರು ಕೂಡ ತಕ್ಕ ಉತ್ತರ ನೀಡಿದ್ದು, ಇಂದು ಸಂಜೆ ತನಕ ಗಡಿಯಲ್ಲಿ ಬಿಎಸ್ಎಫ್ ನಡೆಸಿದ ಕಾಳಗದಲ್ಲಿ 8 ಪಾಕ್ ಸೈನಿಕರನ್ನು ಹತ್ಯೆಮಾಡಲಾಗಿದೆ.

ನಿನ್ನೆ ಪಾಕ್ ದಾಳಿಯಲ್ಲಿ ಹುತಾತ್ಮರಾದ ಮೂವರು ಸೈನಿಕರನ್ನ ರಾಜಸ್ಥಾನ ಮೂಲದ ಪ್ರಭು ಸಿಂಗ್ , ಉತ್ತರ ಪ್ರದೇಶದ ಮನೋಜ್ ಕುಶ್ವತ್ ಹಾಗೂ ಶಶಾಂಕ್ ಕೆ ಸಿಂಗ್ ಎಂದು ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin