ಪಾಕ್ ನಲ್ಲಿ ಅಪರೂಪದ ಅಂತರ್ಧರ್ಮೀಯ ವಿವಾಹ : ಮುಸ್ಲಿಂ ಯುವಕನ ಕೈಹಿಡಿದ ಹಿಂದೂ ಯುವತಿ

Spread the love

Married

ಇಸ್ಲಾಮಾಬಾದ್, ಆ.28– ಪಾಕಿಸ್ತಾನದಲ್ಲಿ ಒಂದು ಅಪರೂಪದ ಅಂತರ್ಧರ್ಮೀಯ ವಿವಾಹ ಶಾಂತಿಯುತವಾಗಿ ನಡೆದಿದೆ. ಪೋಷಕರ ಒಪ್ಪಿಗೆ ಮೇರೆಗೆ ಹಿಂದೂ ಧರ್ಮದ ಯುವತಿಯೊಬ್ಬಳು ತನ್ನ ಬಾಲ್ಯದ ಗೆಳೆಯನಾಗಿರುವ ಮುಸ್ಲಿಂ ಯುವಕನನ್ನು ಶಾಸ್ತ್ರೋಕ್ತವಾಗಿ ವರಿಸಿದ್ದಾಳೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ಅಪರೂಪದ ಅಂತರ್ಧರ್ಮೀಯ ಮದುವೆ ನಡೆದಿದ್ದು, ಗೊರ್ಧನ್ ದಾಸ್ ಖತ್ರಿ ಅವರ ಪುತ್ರಿ, ಮೊಹಮ್ಮದ್ ಯೂಸುಫ್ ಕೈಮ್ಖಾನಿ ಅವರ ಪುತ್ರ ಬಿಲಾಲ್ ಕೈಮ್ಖಾನಿ ಅವರನ್ನು ವಿವಾಹ ಆಗಿದ್ದಾಳೆ.   ಗೊರ್ಧನ್ ಮತ್ತು ಮೊಹಮ್ಮದ್ ಇಬ್ಬರು ಹಳೆಯ ಸ್ನೇಹಿತರು. ಗೊರ್ಧನ್ ದಾಸ್ ಪುತ್ರಿ ಹಾಗೂ ಮೊಹಮ್ಮದ್ ಪುತ್ರ ಬಿಲಾಲ್ ಕೂಡ ಬಾಲ್ಯದ ಗೆಳೆಯರು. ಈ ಎರಡು ಕುಟುಂಬಗಳು ಹಲವು ವರ್ಷಗಳಿಂದ ಸಿಂಧ್ ಪ್ರಾಂತ್ಯದ ಖಿಪ್ರೊ ನಗರದಲ್ಲಿ ಒಟ್ಟಿಗೆ ವಾಸಿಸುತ್ತಿವೆ.

ಹೀಗಾಗಿ ಗೊರ್ಧನ್ ತಮ್ಮ ಪುತ್ರಿಯನ್ನು ಸ್ವಇಚ್ಛೆಯಿಂದಲೇ ಇಸ್ಲಾಂಗೆ ಮತಾಂತರಗೊಳಿಸಿ ಶಾಸ್ತ್ರೋಕ್ತವಾಗಿ ವಿವಾಹ ಮಾಡಿಕೊಟ್ಟಿದ್ದಾರೆ. ಮದುವೆ ನಂತರ ನಡೆದ ಅರತಕ್ಷತೆ ಸಮಾರಂಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯವರು, ಎರಡು ಕುಟುಂಬಗಳ ಸಂಬಂಧಿಕರು ಪಾಲ್ಗೊಂಡಿದ್ದರು.  ಇನ್ನು, ಪಾಕಿಸ್ತಾನಲ್ಲಿ ಹಿಂದೂ ಯುವತಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿದ ಪ್ರಕರಣಗಳು ಈ ಹಿಂದೆ ಬಹಳಷ್ಟು ನಡೆದಿವೆ. ಅಲ್ಲದೇ ಹಿಂದೂಗಳ ಒಪ್ಪಿಗೆ ಇಲ್ಲದೆ ಯುವತಿಯರನ್ನು ಮತಾಂತರಗೊಳಿಸಿದ ಬಗ್ಗೆ ಕೂಡ ಇಲ್ಲಿನ ಹಿಂದೂ ಮುಖಂಡರು ಪ್ರಶ್ನಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin