ಪಾಕ್ ಭಯೋತ್ಪಾದಕ ದೇಶ ಎಂದು ಘೋಷಿಸಲು ಸಹಿ ಹಾಕಿದರು 1 ಲಕ್ಷಕ್ಕೂ ಅಧಿಕ ಮಂದಿ
ನ್ಯೂಯಾರ್ಕ್. ಸೆ.27-ಪಾಕಿಸ್ತಾನವು ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುತ್ತಿರುವ ದೇಶ ಎಂದು ಘೋಷಿಸಲು ಕೋರಿರುವ ಶ್ವೇತಭವನದ ಆನ್ಲೈನ್ ಅರ್ಜಿಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಈವರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. ಇದರಿಂದ ಮತ್ತೊಮ್ಮೆ ಇಸ್ಲಾಮಾಬಾದ್ಗೆ ಭಾರೀ ಮುಖಭಂಗವಾಗಿದೆ. ಪಾಕ್ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಅಂಕಿತ ಪಡೆಯುವ ಈ ಅಭಿಯಾನಕ್ಕೆ ಇದರಿಂದ ಹಾದಿ ಸುಗಮಗೊಂಡಿದೆ. ಕಳೆದ ವಾರ ಭಾರತೀಯ ಮೂಲದ ಅಮೆರಿಕನ್ನರು ಈ ಆನ್ಲೈನ್ ಅರ್ಜಿಗೆ ಚಾಲನೆ ನೀಡಿದ್ದರು. ಈಗ 1,10,000 ಮಂದಿ ಈ ಕೋರಿಕೆ ಅರ್ಜಿಗೆ ಸಹಿ ಹಾಕುವ ಮೂಲಕ ಶ್ವೇತಭವನದ ವೆಬ್ಸೈಟ್ನ ಮೂರನೇ ಅತ್ಯಂತ ಜನಮನ್ನಣೆಯ ಅರ್ಜಿ ಎಂಬ ಹೆಗ್ಗಳಿಕೆ ಪಡೆದಿದೆ.
ಒಬಾಮಾ ಆಡಳಿತವು 60 ದಿನಗಳ ಒಳಗೆ ಈ ಅರ್ಜಿಗೆ ಪ್ರತಿಕ್ರಿಯೆ ನೀಡುವ ನಿರೀಕ್ಷೆ ಇದೆ. ಈ ಆನ್ಲೈನ್ ಅರ್ಜಿಯನ್ನು ಸೆ.21ರಂದು ಸೃಷ್ಟಿಸಲಾಗಿದ್ದು, ನಿರೀಕ್ಷೆಗೂ ಮೀರಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
► Follow us on – Facebook / Twitter / Google+