ಪಾಕ್ ಸೈನಿಕರ ಪೈಶಾಚಿಕ ಕೃತ್ಯಕ್ಕೆ ಲಷ್ಕರ್ ಉಗ್ರರು ಸಾಥ್, ಭಾರತೀಯ ಸೈನಿಕರಿಂದ ಪ್ರತಿಕಾರದ ಶಪಥ
ಜಮ್ಮು/ನವದೆಹಲಿ, ಮೇ 2-ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಕಾಶ್ಮೀರ ಕಣಿವೆಯ ಪೂಂಚ್ ಜಿಲ್ಲೆಯ ಗಡಿಯಲ್ಲಿ ಭಾರತದ ಇಬ್ಬರು ಸೈನಿಕರ ಶಿರಚ್ಛೇದ ಮಾಡಿದ ಪಾಕ್ನ ಕ್ರೂರ ಯೋಧರ ಪೈಶಾಚಿಕ ಕೃತ್ಯಕ್ಕೆ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರರು ಸಾಥ್ ನೀಡಿರುವುದು ದೃಢಪಟ್ಟಿದೆ. ಇದಕ್ಕೆ ಪ್ರತೀಕಾರವಾಗಿ 7 ಪಾಕಿಗಳನ್ನು ಖತಂ ಮಾಡಿರುವ ಭಾರತೀಯ ಸೇನಾಪಡೆ, ಪಾಕ್ ಯೋಧರು ಮತ್ತು ಉಗ್ರರಿಂದ ಎದುರಾಗಿರುವ ಜಂಟಿ ಸವಾಲಿನ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲು ಸಜ್ಜಾಗಿವೆ. ಪಾಕಿಸ್ತಾನದ ಕ್ರೌರ್ಯಕ್ಕೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿರುವ ಆರೋಗ್ಯ ಸೇನಾಪಡೆ ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸಿದೆ.
ಪಾಕಿಸ್ತಾನಿ ಯೋಧರು ಮತ್ತು ಲಷ್ಕರ್ ಉಗ್ರರನ್ನು ಒಳಗೊಂಡ ಗಡಿ ಕ್ರಿಯಾ ತಂಡ (ಬಾರ್ಡರ್ ಆಕ್ಷನ್ ಟೀಮ್-ಬ್ಯಾಟ್) ಕೃಷ್ಣಾಘಾಟಿ ಬಳಿ ಭಾರತೀಯ ನೆಲದೊಳಗೆ 250 ಮೀಟರ್ ನುಗ್ಗಿ ಹೆಡ್ ಕಾನ್ಸ್ಟೆಬಲ್ ಪ್ರೇಮ್ ಸಾಗರ್ ಮತ್ತು ಸುಬೇದಾರ ಪರಂಜೀತ್ ಸಿಂಗ್ರ ಶಿರಚ್ಛೇದ ಮಾಡಿತು. ಅಲ್ಲದೆ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ವಿರೂಪಗೊಳಿಸಿ ಅಟ್ಟಹಾಸ ಮೆರೆದರು. ಪಾಕ್ ಯೋಧರು ಮತ್ತು ಉಗ್ರರ ಮೋಸದ ಕೃತ್ಯದಲ್ಲಿ ಬಿಎಸ್ಎಫ್ ಪೇದೆ ರಾಜೀಂದರ್ ಸಿಂಗ್ ತೀವ್ರ ಗಾಯಗೊಂಡಿದ್ದಾರೆ. ಇದು ಪೂರ್ವಯೋಜಿತ ಕೃತ್ಯವಾಗಿದ್ದು, ಉಗ್ರರ ಶೋಧಕ್ಕೆಂದು ತೆರಳಿದ ಯೋಧರ ಗಮನ ಬೇರೆಡೆ ಸೆಳೆದು ಮೃತ್ಯುಕೂಪಕ್ಕೆ ಕೆಡವಿಕೊಳ್ಳುವ ಪಾಕ್ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪೈಶಾಚಿಕ ಕೃತ್ಯ ಪುನರಾವರ್ತನೆ :
ಕಳೆದ 6 ತಿಂಗಳಿನಲ್ಲಿ ಇಂಥ ಪಾಶವೀ ಕೃತ್ಯಗಳನ್ನು ಪಾಕ್ ಎಸಗಿರುವುದು ಇದು ಮೂರನೇ ಬಾರಿಯಾಗಿದೆ. ಕಳೆದ ಅಕ್ಟೋಬರ್-ನವೆಂಬರ್ನಲ್ಲಿ ಮೂವರನ್ನು ಪಾಕ್ ಯೋಧರು ಇದೇ ರೀತಿ ನಿರ್ದಯವಾಗಿ ಹತ್ಯೆ ಮಾಡಿದ್ದರು. ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನವು ಪೂಂಚ್ ಮತ್ತು ರಜೌರಿಯಲ್ಲಿ ಒಂದು ತಿಂಗಳಲ್ಲಿ ಏಳು ಬಾರಿ ಕದನ ವಿರಾಮ ಉಲ್ಲಂಘಸಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 78 ಬಾರಿ ಅಪ್ರಚೋದಿತ ದಾಳಿ ನಡೆಸಿದೆ. 2016ರಲ್ಲಿ 228 ಬಾರಿ(ಎಲ್ಒಸಿಯಲ್ಲಿ 221 ಸಲ) ಯುದ್ಧ ವಿರಾಮ ನಿಯಮಗಳನ್ನು ಪಾಕ್ ಯೋಧರು ಗಾಳಿಗೆ ತೂರಿದ್ದಾರೆ. ಭಾರತೀಯ ಭದ್ರತಾ ಪಡೆಗಳು 2016ರಲ್ಲಿ 150 ಉಗ್ರರನ್ನು, 2015ರಲ್ಲಿ 110 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು.
ಹಿಜ್ಬುಲ್ ಉಗ್ರರ ಘೋರ ಕೃತ್ಯ :
ಕಾಶ್ಮೀರ ಕುಲ್ಗಾಂನಲ್ಲಿ ಬ್ಯಾಂಕ್ ವಾಹನದ ಮೇಲೆ ದಾಳಿ ನಡೆಸಿ ಏಳು ಜನರನ್ನು ಕೊಂದು ನಗದು ದೋಚಿದ್ದ ಕೃತ್ಯದ ಹಿಂದೆ ತನ್ನ ಕೈವಾಡ ಇರುವುದಾಗಿ ಹಿಜ್ಬುಲ್ ಮುಜÁಹಿದ್ಧೀನ್ (ಎಚ್ಎಂ) ಉಗ್ರಗಾಮಿ ಸಂಘಟನೆ ಹೇಳಿಕೊಂಡಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS