ಪಾಲಿಷ್ ನೆಪದಲ್ಲಿ 3 ಮಾಂಗಲ್ಯ ಸರಗಳೊಂದಿಗೆ ವಂಚಕರು ಪರಾರಿ

ಮೈಸೂರು, ಮೇ 20- ಚಿನ್ನಾಭರಣಗಳ ಪಾಲಿಷ್ ನೆಪದಲ್ಲಿ ಮನೆ ಬಳಿ ಬಂದ ಇಬ್ಬರು ವಂಚಕರು 150 ಗ್ರಾಂ ತೂಕದ ಮೂರು ಮಾಂಗಲ್ಯ ಸರ ಹಾಗೂ ಚಿನ್ನದ ಗುಂಡುಗಳೊಂದಿಗೆ ಪರಾರಿಯಾಗಿರುವ ಘಟನೆ ಕೆಆರ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕೆಆರ್ ನಗರದ ಮಧುವನಹಳ್ಳಿ ಬಡಾವಣೆಯ ರಾಮಶೆಟ್ಟಿ ಎಂಬುವರ ಪತ್ನಿ ಸುಶೀಲಮ್ಮ ಸೇರಿದಂತೆ ನೆರೆಹೊರೆಯ ಮಹಿಳೆಯರು ಈ ವಂಚನೆಗೆ ಒಳಗಾಗಿದ್ದಾರೆ.ನಿನ್ನೆ ಮಧುವನಹಳ್ಳಿ ಬಡಾವಣೆಗೆ ಬೈಕ್‍ನಲ್ಲಿ ಬಂದ ಇಬ್ಬರು ಮನೆ ಬಾಗಿಲಿನಲ್ಲಿ ನಿಂತಿದ್ದ ಸುಶೀಲಮ್ಮ ಅವರನ್ನು ಮಾತನಾಡಿಸಿ ನಾವು ಮಜಲಾ ಶೈನಿಂಗ್ ಪೌಡರ್ ಮಾರುವವರು. ಈ ಪೌಡರ್ ಬಳಸಿ ದೇವರ ಸಾಮಗ್ರಿ, ಟೈಲ್ಸ್ ಮತ್ತಿತರ ವಸ್ತುಗಳನ್ನು ಶೈನಿಂಗ್ ಬರಿಸುವುದಾಗಿ ತಿಳಿಸಿದ್ದಾರೆ.

ಇದನ್ನು ನಂಬಿದ ಸುಶೀಲಮ್ಮ ಅವರಿಗೆ ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಲು ಕೊಟ್ಟಿದ್ದಾರೆ. ಈ ಇಬ್ಬರು ವಂಚಕರು ಪೂಜಾ ಸಾಮಗ್ರಿ ಸ್ವಚ್ಛಗೊಳಿಸುತ್ತಿದ್ದಾಗ ನೆರೆಹೊರೆಯವರು ಇವರ ಮನೆ ಬಳಿ ಬಂದು ಅವರನ್ನು ಮಾತನಾಡಿಸಿ ಮಾಂಗಲ್ಯ ಸರಗಳನ್ನು ಪಾಲಿಷ್ ಮಾಡಿಕೊಡುವಂತೆ ಕೊಟ್ಟಿದ್ದಾರೆ.ಇದೇ ಸಮಯವನ್ನರಿತ ವಂಚಕರು ಮೂರು ಮಾಂಗಲ್ಯ ಸರ, ಗುಂಡುಗಳನ್ನು ಪಾಲಿಷ್ ಮಾಡುವಂತೆ ನಟಿಸಿ ಬೈಕ್‍ನಲ್ಲಿ ಪರಾರಿಯಾಗುತ್ತಿದ್ದಾಗ ಸಹಾಯಕ್ಕಾಗಿ ಮಹಿಳೆಯರು ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೆಆರ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Sri Raghav

Admin