ಪಿಯು ಫಲಿತಾಂಶ ಪ್ರಕಟ, ಎಂದಿನಂತೆ ಬಾಲಕಿಯರೇ ಮುಂದು, ಉಡುಪಿ ಫಸ್ಟ್, ಬೀದರ್ ಲಾಸ್ಟ್

PUC-01

ಬೆಂಗಳೂರು,ಮೇ 11-ವಿದ್ಯಾರ್ಥಿ ಜೀವನದ ಎರಡನೇ ಮಹತ್ವದ ಘಟ್ಟವಾದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ.4.82ರಷ್ಟು ಫಲಿತಾಂಶ ಕುಸಿತಗೊಂಡಿದೆ.   ಪ್ರಸ್ತಕ ವರ್ಷ ಶೇ.52.38ರಷ್ಟು ಫಲಿತಾಂಶ ಬಂದಿದ್ದು , ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4.82ರಷ್ಟು ಫಲಿತಾಂಶದಲ್ಲಿ ಕುಸಿತವಾಗಿದೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.   ಜಿಲ್ಲಾವಾರು ವಿಭಾಗದಲ್ಲಿ ಉಡುಪಿ ಪ್ರಥಮ( ಶೇ.90.09) 2ನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(89.92), ಮೂರನೇ ಸ್ಥಾನದಲ್ಲಿ ಉತ್ತರ ಕನ್ನಡ (71.99) ಹಾಗೂ ಕೊನೆಯ ಸ್ಥಾನ ಬೀದರ್(ಶೇ.42.05)ನಲ್ಲಿ ಗಳಿಸಿದೆ.

ಒಟ್ಟು ಪರೀಕ್ಷೆಗೆ ಹಾಜರಾದ 6,79,061 ವಿದ್ಯಾರ್ಥಿಗಳಲ್ಲಿ 3,55,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಇಂದಿಲ್ಲಿ ತಿಳಿಸಿದರು.   ಇದರಲ್ಲಿ ಹೊಸಬರು 5,43,443 ವಿದ್ಯಾರ್ಥಿಗಳ ಪೈಕಿ 3,23,512(ಶೇ.59.90) 105335, ಖಾಸಗಿ ವಿದ್ಯಾರ್ಥಿಗಳಲ್ಲಿ 24086 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ(ಶೇ.22.86),   ಪುನರಾವರ್ತಿತ 30283 ವಿದ್ಯಾರ್ಥಿಗಳಲ್ಲಿ 6099 ವಿದ್ಯಾರ್ಥಿಗಳು (ಶೇ. 20.14) ಉತ್ತೀರ್ಣರಾಗಿದ್ದಾರೆ.

ಬಾಲಕಿಯರೇ ಮೇಲುಗೈ:

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.   ಈ ಬಾರಿ 3,33,892 ವಿದ್ಯಾರ್ಥಿಗಳ ಪೈಕಿ 20,1273(ಶೇ.60.28) ವಿದ್ಯಾರ್ಥಿಗಳು, ಅದೇ ರೀತಿ ಬಾಲಕರಲ್ಲಿ 3,45169 ಪೈಕಿ 1,54,424 ಬಾಲಕರು (ಶೇ.44.74) ತೇರ್ಗಡೆಯಾಗಿದ್ದಾರೆ.

ನಗರ ವಿದ್ಯಾರ್ಥಿಗಳ ಮೇಲುಗೈ:

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗ್ರಾಮಾಂತರ ಭಾಗಕ್ಕಿಂತ ನಗರ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 5,22,581 ವಿದ್ಯಾರ್ಥಿಗಳು ನಗರ ಪ್ರದೇಶದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದು, 2,76,325 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. (ಶೇ.52.88)
ಕಳೆದ ವರ್ಷ ನಗರ ಪ್ರದೇಶದಲ್ಲಿ 4,88,822 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 2,80,408 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. (ಶೇ.57.36) ಪ್ರಸಕ್ತ ಸಾಲಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 1,56,480 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 79,276ವಿದ್ಯಾರ್ಥಿಗಳು ಪಾಸಾಗಿದ್ದಾರೆ. (ಶೇ.50.72) ಕಳೆದ ವರ್ಷ 1,47,546 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 83,605 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. (ಶೇ.56.66)
ಸಂಯೋಜನೆವಾರು ಫಲಿತಾಂಶ:

ಕಲಾ-2,14,469 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 75,166 ಮಂದಿ ಪಾಸಾಗಿದ್ದಾರೆ.(ಶೇ.35.05)
ವಾಣಿಜ್ಯ-2,46,743 ವಿದ್ಯಾರ್ಥಿಗಳು ಹಾಜರಾಗಿದ್ದು, 1,48,269 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.(ಶೇ.60.09)
ವಿಜ್ಞಾನ-2,17,849 ವಿದ್ಯಾರ್ಥಿಗಳು ಹಾಜರಾಗಿದ್ದು, 1,32,262 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.(ಶೇ.60.71)
ಜಾತಿ-ವರ್ಗ; ಪರಿಶಿಷ್ಟ ಜಾತಿಯಲ್ಲಿ 1,21,608 ವಿದ್ಯಾರ್ಥಿಗಳು ಪರಿಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 49,257 ಮಂದಿ ತೇರ್ಗಡೆಯಾಗಿದ್ದಾರೆ.(ಶೇ.40.50)

ಮಾಧ್ಯಮವಾರು ಫಲಿತಾಂಶ:

ಕನ್ನಡ ವಿಷಯದಲ್ಲಿ 2,95,911 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 1,20,386 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. (ಶೇ.40.68)
ಇಂಗ್ಲಿಷ್:  3,83,150 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರೂ ಅದರಲ್ಲಿ 2,55,311ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. (ಶೇ.61.41)

ಸಂಯೋಜನೆವಾರು ಹೆಚ್ಚು ಅಂಕಗಳಿಸಿದ ವಿವರ:

ಕಲಾಸಂಯೋಜನೆ: ಪರಿಶಿಷ್ಟಜಾತಿ-579, ಪರಿಶಿಷ್ಟ ಪಂಗಡ 579, ಇತರರು 589.
ವಾಣಿಜ್ಯ ಸಂಯೋಜನೆ- ಪರಿಶಿಷ್ಟ ಜಾತಿ 582, ಪರಿಶಿಷ್ಟ ಪಂಗಡ 587, ಇತರರು 595.
ವಿಜ್ಞಾನ ಸಂಯೋಜನೆ- ಪ.ಜಾ-587, ಪ.ಪಂ-589, ಇತರರು 596.

ರಾಜ್ಯದಲ್ಲಿ ವಿವಿಧ ಶ್ರೇಣಿಯಲ್ಲಿ ಉತ್ತೀರ್ಣರಾದವರ ವಿವರ:

ಉನ್ನತ ಶ್ರೇಣಿ ಶೇ.85ಅಥವಾ ಅದಕ್ಕಿಂತ ಹೆಚ್ಚಿಗೆ ಅಂಕ ಪಡೆದವರು 45,983. ಪ್ರಥಮ ದರ್ಜೆಯಲ್ಲಿ ಶೇ.85ಕ್ಕಿಂತ ಕಡಿಮೆ 1,92,012. ದ್ವೀತಿಯ ದರ್ಜೆ ಶೇ.60ಕ್ಕಿಂತ ಕಡಿಮೆ ಇರುವವರು 71,532 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಟಾಪರ್ಸ್:

ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಇಂದೂ ಪಿಯು ಕಾಲೇಜಿನ ಚೈತ್ರಾ ಅವರು 600ಕ್ಕೆ 589 ಅಂಕ ಗಳಿಸಿ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಮಂಗಳೂರು ಎಕ್ಸ್ಪೋರ್ಟ್ ಕಾಲೇಜಿನ ಸೃಜನಾ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದ ಗಂಗೋಳ್ಳಿಯ ಎಸ್‍ಯುಪಿಯು ಕಾಲೇಜಿನ ರಾಧಿಕಾ ಪೈ ವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 596ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲೂಕಿನ ಆಳ್ವಾಸ್ ಕಾಲೇಜಿನ ಸ್ಪಂದನಾ ಅವರು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಧಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪೂರಕ ಪರೀಕ್ಷೆ:

ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆಗೆ ಅನುತ್ತೀರ್ಣ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಕಡೆ ದಿನಾಂಕ ಜೂನ್ 23, ಕಾಲೇಜಿನವರು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ ಸಂದಾಯ ಮಾಡಬೇಕಾದ ದಿನಾಂಕ ಜೂನ್ 24.  ಕಾಲೇಜಿನವರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಜೂನ್ 25ರೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರವರ್ಗ -1 ವಿದ್ಯಾರ್ಥಿಗಳನ್ನು ಹೊರತುಪಡಿಸಿ ಒಂದು ವಿಷಯಕ್ಕೆ ವಿದ್ಯಾರ್ಥಿಗಳು 101ರೂ. ಪರೀಕ್ಷಾ ಶುಲ್ಕ ಪಾವತಿಸಬೇಕು. ಎರಡು ವಿಷಯಕ್ಕೆ 201ರೂ. ಮೂರು ಅಥವಾ ಅದಕ್ಕಿನ್ನ ಹೆಚ್ಚು ವಿಷಯಗಳಿಗೆ 302 ರೂ.   ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರವರ್ಗ ಒಂದರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಲ್ಲಿಸಬೇಕಾದ ಅಂಕಪಟ್ಟಿ ಶುಲ್ಕ 36ರೂ. ಪಳಿತಾಂಶ ತಿರಸ್ಕರಣಾ ಶುಲ್ಕ ಪ್ರಥಮ ಬಾರಿಗೆ ಒಂದು ವಿಷಯಕ್ಕೆ 126ರೂ. ದ್ವಿತೀಯ ಹಾಗೂ ಅಂತಿಮ ಬಾರಿಗೆ ಒಂದು ವಿಷಯಕ್ಕೆ 252ರೂ. ಪಾವತಿಸಬೇಕೆಂದು ತಿಳಿಸಲಾಗಿದೆ.

 

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  Sri Raghav

Admin