ಪುಖರಾಯನ್ ರೈಲು ದುರಂತ : 143 ಮೃತದೇಹ ಹೊರಕ್ಕೆ, 111 ಶವಗಳ ಗುರುತು ಪತ್ತೆ

Spread the love

Train-Accident

ಪುಖರಾಯನ್, ನ.21- ಉತ್ತರಪ್ರದೇಶದ ಕಾನ್ಪುರದ ಪುಖರಾಯನ್ ಬಳಿ ನಿನ್ನೆ ಬೆಳಗಿನ ಜಾವ ಸಂಭವಿಸಿದ ಭೀಕರ ರೈಲು ದುರಂತ ಸ್ಥಳದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಮುಂದುವರೆದಿದೆ. ಈವರೆಗೆ 143 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇವರಲ್ಲಿ 111 ಶವಗಳನ್ನು ಗುರುತಿಸಲಾಗಿದೆ. ನಜ್ಜುಗುಜ್ಜಾದ ಬೋಗಿಯ ಮಧ್ಯೆ ಸಿಲುಕಿದ್ದ ಕೆಲವು ಗಾಯಾಳುಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ (ಕಾನ್ಪುರ ವಲಯ) ಝಾಕಿ ಅಹಮದ್ ತಿಳಿಸಿದ್ದಾರೆ.  ಇಂದೋರ್‍ನಿಂದ ಪಾಟ್ನಾಗೆ ತೆರಳುತ್ತಿದ್ದ ರೈಲು ಕಾನ್ಪುರದಿಂದ 100 ಕಿ.ಮೀ. ದೂರದಲ್ಲಿರುವ ಪುಖರಾಯನ್ ರೇಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿ ಈ ದುರ್ಘಟನೆ ಸಂಭವಿಸಿತ್ತು.

ಬೋಗಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ಅನೇಕ ಪ್ರಯಾಣಿಕರನ್ನು ನಿನ್ನೆ ರಕ್ಷಿಸಲಾಗಿತ್ತು. ಗಾಯಗೊಂಡ 200ಕ್ಕೂ ಹೆಚ್ಚು ಜನರನ್ನು 30 ಆಂಬ್ಯುಲೆನ್ಸ್‍ಗಳ ಮೂಲಕ ಹತ್ತಿರ ಆಸ್ಪತ್ರೆಗಳಿಗೆ ಸೇರಿಸಲಾಗಿತ್ತು.. ತೀವ್ರ ಗಾಯಗೊಂಡವರ ಪರಿಸ್ಥಿತಿ ಶೋಚನಿಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.  ಎನ್‍ಡಿಆರ್‍ಎಫ್, ಪೊಲೀಸರು ಮತ್ತು ಅಗ್ನಿಶಾಮಕ ಹಾಗೂ ಸಾರ್ವಜನಿಕರು ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin