ಮತ್ತೆ ಮಿನಿ ಏರ್ ಪೋರ್ಸ್ ಬೇಡಿಕೆಯಿಟ್ಟ ಭೂಸೇನೆ, 11 ಅಪಾಚೆ ಹೆಲಿಕಾಪ್ಟರ್‍ಗಳಿಗೆ ಕೋರಿಕೆ

Mini--Airforce

ನವದೆಹಲಿ, ಮೇ 20-ಅಪತ್ಕಾಲದಲ್ಲಿ ನೆರವಾಗಲು ತನ್ನದೇ ದ ಪುಟ್ಟ ವಾಯು ಪಡೆ (ಮಿನಿ ಏರ್ ಪೋರ್ಸ್ ) ಸೌಲಭ್ಯ ಬೇಕೆಂಬ ತನ್ನ ಹಳೆಯ ಬೇಡಿಕೆಯನ್ನು ಭೂ ಸೇನೆ ಮತ್ತೆ ಕೇಂದ್ರ ಸರ್ಕಾರದ ಮುಂದಿಟ್ಟಿದೆ. ತನ್ನ ಮೂರು ಪ್ರಾಥಮಿಕ ಆಕ್ರಮಣ ವಿಭಾಗಗಳಿಗೆ ಹೆವಿ-ಡ್ಯೂಟಿ ದಾಳಿ ಹೆಲಿಕಾಪ್ಟರ್‍ಗಳು ಬೇಕೇ ಬೇಕೆಂದು ಸೇನೆ ಪಟ್ಟು ಹಿಡಿದಿದೆ. ವೈರಿ ಸರಹದ್ದಿನ ಪ್ರದೇಶಗಳಲ್ಲಿ ಕ್ಷಿಪ್ರ ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸಲು ಹಾಗೂ ಎದುರಾಗಬಹುದಾದ ಗಂಡಾಂತರಗಳನ್ನು ಸಮರ್ಥವಾಗಿ ನಿಭಾಯಿಸಲು ಅಮೆರಿಕದಿಂದ 11 ಅಪಾಚೆ ಆಟ್ಯಾಕ್ ಹೆಲಿಕಾಪ್ಟರ್‍ಗಳನ್ನು ಹೊಂದಲು ಅನುಮೋದನೆ ನೀಡಬೇಕೆಂದು ಸಹ ಸೇನೆ ಒತ್ತಾಯಿಸಿದೆ. ಈ ಬೇಡಿಕೆಗೆ ಹಿಂದಿನಿಂದಲೂ ವಾಯು ಪಡೆ ವಿರೋಧಿಸುತ್ತಲೇ ಬಂದಿತ್ತು. ಇದರೊಂದಿಗೆ ಭೂ ಸೇನೆ ಮತ್ತು ವಾಯುಪಡೆ ನಡುವೆ ಈ ವಿಷಯದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಈಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.ಅನಿವಾರ್ಯ ಸಂದರ್ಭದಲ್ಲಿ ತನ್ನ ಆಕ್ರಮಣ ದಳಗಳನ್ನು ಕ್ಷಿಪ್ರವಾಗಿ ನಿಯೋಜಿಸುವುದಕ್ಕಾಗಿ ತನಗೆ ತನ್ನದೇ ಆದ ಮಿನಿ ಏರ್ ಪೋರ್ಸ್ ಅಗತ್ಯವಿದೆ. ಶತ್ರುಗಳ ಹಠಾತ್ ದಾಳಿ ಸಂದರ್ಭದಲ್ಲಿ ವಾಯು ಪಡೆ ಮೇಲೆ ಪೂರ್ಣವಾಗಿ ಅವಲಂಬಿಸುವುದಕ್ಕಿಂತ ಸ್ವಂತ ಹೆಲಿಕಾಪ್ಟರ್‍ಗಳನ್ನು ಹೊಂದುವುದು ಅಗತ್ಯ ಎಂಬುದು ಸೇನೆ ಅಭಿಪ್ರಾಯವಾಗಿದೆ.  ಭಾರತೀಯ ವಾಯು ಪಡೆಗೆ(ಐಎಎಫ್) 13,952 ಕೋಟಿ ರೂ. ಮೊತ್ತದ 22 ಅತ್ಯಾಧುನಿಕ ಹೆಲಿಕಾಪ್ಟ್‍ಗಳನ್ನು ಒದಗಿಸಲು ಸಹಿ ಹಾಕಲಾಗಿದೆ. ಇದೇ ರೀತಿ ಸೇನೆಗೂ 11 ಅಪಾಚೆ ಅಕ್ರಮಣ ಹೆಲಿಕಾಪ್ಟರ್‍ಗಳನ್ನು ನೀಡಲು ಸರ್ಕಾರ ಕೈಗೊಳ್ಳಬೇಕು ಎಂಬುದು 1.3 ದಶಲಕ್ಷ ಯೋಧರನ್ನು ಪ್ರತಿನಿಧಿಸಿರುವ ಬಲಿಷ್ಠ ಭೂ ಸೇನೆಯ ಆಗ್ರಹ.

ರಕ್ಷಣಾ ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ರಕ್ಷಣಾ ಸೌಲಭ್ಯಗಳನ್ನು ಹೊಂದುವ ಮಂಡಳಿ (ಡಿಎಸಿ) ಸಭೆಯಲ್ಲಿ ಈ ಪ್ರಸ್ತಾವನೆಗೆ ಸಮ್ಮತಿ ಲಭಿಸುವ ನಿರೀಕ್ಷೆ ಇದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin