ಪೆಟ್ರೋಲ್ ಬೆಲೆಯಲ್ಲಿ ರೂ. 0.13 ಎರಿಕೆ, ಡೀಸೆಲ್ ಬೆಲೆಯಲ್ಲಿ ರೂ.0.12 ಇಳಿಕೆ

Petrol-01

ನವದೆಹಲಿ ನ.30 : ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಮಾಡಲಾಗಿದೆ. ಪ್ರತಿ ಪೆಟ್ರೋಲ್’ಗೆ ರೂ. 0.13 ಪ್ರತಿ ಲೀಟರ್ ಹೆಚ್ಚಿಸಲಾಗಿದ್ದರೆ, ಡೀಸೆಲ್ ಬೆಲೆಯನ್ನು ರೂ.0.12 ಇಳಿಸಲಾಗಿದೆ. ಕಳೆದ ನ.15ರಂದು ಪೆಟ್ರೋಲ್’ಗೆ ಪ್ರತಿ ಲೀಟರ್ ರೂ.1.46 ಇಳಿಸಲಾಗಿತ್ತು ಹಾಗೂ ಡಿಸೇಲ್ ಬೆಲೆಯನ್ನು ರೂ.1.53ರಷ್ಟು ಇಳಿಸಲಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ಅದಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿಯೂ ಬೆಲೆ ಪರಿಷ್ಕರಣೆ ಮಾಡಲಾಗಿದೆ.

ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಆಧರಿಸಿ, ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುತ್ತವೆ. ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗಲಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin