`ಪೊರ್ಕಿ ಹುಚ್ಚ ವೆಂಕಟ’ ರೆಡಿ

venkat-1
ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಹುಚ್ಚ ವೆಂಕಟ್ ಅವರ ನಿರ್ದೇಶನದ ದ್ವಿತೀಯ ಚಿತ್ರ `ಪೊರ್ಕಿ  ಹುಚ್ಚ ವೆಂಕಟ’ ರೆಡಿ ಹುಚ್ಚ ವೆಂಕಟ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದೇ ಸಂದರ್ಭದಲ್ಲಿ ವೆಂಕಟ ಅವರು ಸ್ಥಾಪಿಸಿದ ಹುಚ್ಚ ವೆಂಕಟ ಸೇನೆಯ ಹುಟ್ಟುಹಬ್ಬವನ್ನು ಕಳೆದ ಭಾನುವಾರದಂದು ಸರಳ ಸಮಾರಂಭದೊಂದಿಗೆ ಆಚರಿಸಲಾಯಿತು.ತನ್ನ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವೆಂಕಟ್ ಈ ಚಿತ್ರದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವಿದೆ. ನಿರ್ಮಲವಾದ ಪ್ರೀತಿಯಿದೆ. ತಾಯಿ ಸೆಂಟಿಮೆಂಟ್ ಇದೆ. ಸಾಹಸಸಿಂಹ ವಿಷ್ಣುವರ್ಧನ್ ಅವರು ನಡೆಸಿಕೊಂಡು ಬಂದಂಥ ತತ್ವಗಳು, ರೈತರ ಪರವಾದ ಕಥೆ ಕೂಡ ಚಿತ್ರದಲ್ಲಿದೆ.ಇನ್ನು ಸಿನಿಮಾದಲ್ಲಿ ಸೌಮ್ಯ ಹಾಗೂ ರಚನಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಬರುವ ಏಪ್ರಿಲ್ ಅಥವಾ ಮೇ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು.

venkat-2
ಇದುವರೆಗೆ ಮಾಧ್ಯಮ ಗಳಿಂದ ನನಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಅದನ್ನು ನಾನು ಎಂದೂ ಮಿಸ್ ಯೂಸ್ ಮಾಡಿಕೊಂಡಿಲ್ಲ.ಪ್ರೀತಿಯನ್ನು ಮಾತ್ರ ಬೆಳೆಸಿಕೊಂಡಿದ್ದೇನೆ ಎಂದು ಕೂಡ ಹೇಳಿದರು. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೆಂಕಟ ಸೇನೆಯ ಪರ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಮುನ್ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ವೆಂಕಟ್‍ನ ತಂದೆ ಹಾಗೂ ನಟ ಸುಂದರ್‍ರಾಜ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.

venkat-3

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin