ಪೊಲೀಸರಿಗೆ ಸವಾಲಾದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ

Spread the love

Bhaskar

ಬೆಂಗಳೂರು,ಆ.10-ಉಡುಪಿಯ ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ  ಕೊಲೆ ಪ್ರಕರಣ ಪೊಲೀಸರಿಗೆ ತೀವ್ರ ಸವಾಲಾಗಿ ಪರಿಣಮಿಸಿದೆ. ಪ್ರಕರಣ ಸಂಬಂಧ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್ ಮತ್ತು ಸ್ನೇಹಿತ ನಿರಂಜನ ಭಟ್ ಈ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರಾದರೂ ಸಾಕ್ಷ್ಯಾಧಾರಗಳ ಒಂಚೂರು ಸುಳಿವೂ ಪೊಲೀಸರಿಗೆ ಸಿಗುತ್ತಿಲ್ಲ.
ಬರೋಬ್ಬರಿ 300 ಕೋಟಿ ಒಡೆಯ ಭಾಸ್ಕರ್ ಶೆಟ್ಟಿಯನ್ನು ವ್ಯವಸ್ಥಿತವಾಗಿ ಸಾಕ್ಷ್ಯಾಧಾರಗಳು ಸಿಗದ ಹಾಗೆ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸಾಕ್ಷಾಧಾರಕ್ಕಾಗಿ ಜಾಲಾಡುತ್ತಿದ್ದರಾದರೂ ಈವರೆಗೂ ಯಾವುದೇ ಕುರುಹುಗಳು ಕಂಡುಬರದಿರುವುದು ತೀವ್ರ ತಲೆನೋವಾಗಿ ಪರಿಣಮಿಸಿದೆ.

ನ್ಯಾಯಾಲಯಕ್ಕೆ ಭಾಸ್ಕರ್ ಶೆಟ್ಟಿ ಕೊಲೆಯಾದ ಬಗ್ಗೆ ಸಾಕ್ಷ್ಯಾಧಾರಗಳನ್ನು ಪೊಲೀಸರು ಸಲ್ಲಿಸಬೇಕು, ಅವರ ಹಲ್ಲು, ಸ್ಕಲ್ ಯಾವುದಾದರೂ ಸಾಕ್ಷಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಅದಕ್ಕಾಗಿ ತಡಕಾಡುತ್ತಿದ್ದಾರೆ. ಆದರೆ ಈವರೆಗೆ ಇನ್ನು ಸಿಕ್ಕಿಲ್ಲ.  ಆರೋಪಿಗಳು ತಪ್ಪು ಒಪ್ಪಿಕೊಂಡಿರುವಂತೆ ಭಾಸ್ಕರ್ ಶೆಟ್ಟಿಯವರನ್ನು ಕೊಲೆ ಮಾಡಿ ಹೋಮ ಕುಂಡದಲ್ಲಿ ಅವರನ್ನು  ದಹಿಸಲಾಗಿದೆ. ನಂತರ ಅವಶೇಷಗಳನ್ನು ಚೀಲವೊಂದಕ್ಕೆ ಹಾಕಿ ಹೊಳೆಯಲ್ಲಿ ಎಸೆದಿದ್ದಾರೆ. ಆದರೆ ಈ ಚೀಲ ಪೊಲೀಸರಿಗೆ ದೊರೆತರೆ ಸಾಕ್ಷ್ಯಾಧಾರಗಳು ಸಿಗಬಹುದು ಎಂಬ ಹಿನ್ನೆಲೆಯಲ್ಲಿ ಮಹಾಬುದ್ದಿವಂತಿಕೆ ಉಪಯೋಗಿಸಿರುವ ಆರೋಪಿಗಳು ಚೀಲದಲ್ಲಿರುವ ಅವಶೇಷಗಳನ್ನು  ಒಂದೇ ಕಡೆ ಎಸೆಯದೆ ಅಲ್ಲಲ್ಲಿ ಎಸೆದಿದ್ದಾರೆ.  [ ಅಗ್ನಿ ಸಾಕ್ಷಿಯಾಗಿ ಮದುವೆಯಾದ ಗಂಡನನ್ನು ಅಗ್ನಿ ಕುಂಡದಲ್ಲೇ ಸುಟ್ಟಳಾ ..! ]

ಪೆಟ್ರೋಲ್‍ನಲ್ಲಿ ದೇಹವನ್ನು ಸಂಪೂರ್ಣ ಬೂದಿಯಾಗುವಂತೆ ಸುಟ್ಟು ಬೂದಿಯನ್ನು ನೀರಿನಲ್ಲಿ ಬಿಟ್ಟಿದ್ದಾರೆ ಎಂದು ತನಿಖೆಯ ಹಂತದಲ್ಲಿ ತಿಳಿದುಬಂದಿದೆ. ಆದರೆ ಅವಶೇಷ ಪೊಲೀಸರಿಗೆ ದೊರಕಬೇಕು. ಇದು ಪೊಲೀಸರ ಸಾಮಥ್ರ್ಯಕ್ಕೊಂದು ಸವಾಲಾಗಿದೆ.   ಪೊಲೀಸರು ಮಾತ್ರ ಹಗಲುರಾತ್ರಿ ಈ ಕೊಲೆಯ ತನಿಖೆ ನಡೆಸುತ್ತಿದ್ದಾರೆ. ಎಂತೆಂಥದ್ದೋ ಪ್ರಕರಣಗಳನ್ನು ನಮ್ಮ ಪೊಲೀಸರು ಬೇಧಿಸಿದ್ದಾರೆ. ಕೇವಲ ಕೂದಲು, ಉಗುರು ಸಿಕ್ಕಿದರೆ ಸಾಕು ಅದರಲ್ಲಿ ಕೊಲೆಯನ್ನು ಸಾಬೀತುಪಡಿಸಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.
ನಮ್ಮ ಪೊಲೀಸರಿಗೆ ಈ ಕೊಲೆಯನ್ನು ಬೇಧಿಸುವುದು ಅಷ್ಟೇನೂ ಕಷ್ಟವಾಗಲಾರದು. ಕೊಂಚ ಸಮಯ ತೆಗೆದುಕೊಳ್ಳಬಹುದು ಎಂದು ಕೆಲ ನಿವೃತ್ತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin