ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತೀವ್ರ ತರಾಟೆ

Parameshwar

ತುಮಕೂರು, ಏ.24- ಗೃಹ ಸಚಿವರು ಪ್ರಯಾಣಿಸುವ ಮಾರ್ಗ ಬಿಟ್ಟು ಇನ್ನೊಂಂದು ಮಾರ್ಗದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದ ಸಂಚಾರಿ ಪೋಲೀಸರ ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‍ಕುಮಾರ್ ಸಂಚಾರಿ ಪೊಲೀಸ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಿನ್ನೆ ಖಾಸಗಿ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದು, ಅಲ್ಲಿಂದ ಹೆಗ್ಗೆರೆ ಸಮೀಪದ ತಮ್ಮ ನಿವಾಸಕ್ಕೆ ತೆರಳಿದ್ದರು.ಅಲ್ಲಿಂದ ಸಚಿವರು ಮತ್ತೊಂದು ಕಾರ್ಯಕ್ರಮಕ್ಕಾಗಿ ಚಿತ್ರದುರ್ಗಕ್ಕೆ ಹೋಗಬೇಕಿತ್ತು. ಇದಕ್ಕಾಗಿ ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಟೌನ್‍ಹಾಲ್ ವೃತ್ತದಿಂದ ಬಟವಾಡಿ ಮಾರ್ಗವಾಗಿ ಶಿರಾ ರಸ್ತೆಗೆ ಸೇರಲು ಸಿದ್ಧತೆ ಮಾಡಿಕೊಂಡಿದಸ್ದರು.

ಆದರೆ, ಸಚಿವರ ಕಾರ್ ಟೌನ್‍ಹಾಲ್ ವೃತ್ತಕ್ಕೆ ಬಂದ ನಂತರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮುಂಭಾಗದಿಂದ ಕೋಟೆ ಆಂಜನೇಯ ದೇಗುಲ ರಸ್ತೆ ಮೂಲಕ ಎನ್‍ಎಚ್-48 ರಸ್ತೆಗೆ ಪ್ರಯಾಣಿಸಿದೆ.ಸಚಿವರ ಕಾರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಕಡೆಗೆ ತಿರುವು ಪಡೆಯುತ್ತಿದ್ದಂತೆ ಪೈಲೆಟ್ ವಾಹನ ಹಾಗೂ ಬಟವಾಡಿ ಮಾರ್ಗದಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಸಂಚಾರಿ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.ಆದ ಅಚಾತುರ್ಯವನ್ನು ಗೃಹ ಸಚಿವರ ಗಮನಕ್ಕೂ ತಂದು ಅವರ ಕೋಪ ಶಮನಗೊಳಿಸಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin