ಪೊಲೀಸ್ ಠಾಣೆಗಳಲ್ಲಿ ಬುಡಕಟ್ಟು ಬಾಲಕಿಯರಿಗೆ ಚಿತ್ರಹಿಂಸೆ, ಸ್ತನಗಳಿಗೆ ಎಲೆಕ್ಟ್ರಿಕ್ ಶಾಕ್..!

Minor-Girls--01

ರಾಯ್‍ಪುರ, ಮೇ 3-ನಕ್ಸಲ್‍ವಾದವನ್ನು ಕೊನೆಗೊಳಿಸುವ ಸೋಗಿನಲ್ಲಿ ಬುಡಕಟ್ಟು ಜನರ ಮೇಲೆ ದೌರ್ಜನ್ಯ ಎಸಗಲು ಅನುಮತಿ ನೀಡುವಂಥ ವ್ಯವಸ್ಥೆ ಛತ್ತೀಸ್‍ಗಢದಲ್ಲಿ ಜಾರಿಯಲ್ಲಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಛತ್ತೀಸ್‍ಗಢ ರಾಜಧಾನಿ ರಾಯ್‍ಪುರ್‍ನ ಸೆಂಟ್ರಲ್ ಜೈಲಿನ ಉಪ ಜೈಲರ್ ಆಗಿರುವ ವರ್ಷಾ ಡೋಂಗ್ರೆ ಹಿಂದಿಯಲ್ಲಿ ಬರೆದಿರುವ ಫೇಸ್‍ಬುಕ್ ಪೋಸ್ಟ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರು ಮಾಡಿರುವ ಆರೋಪಗಳು ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಜೈಲಿನಲ್ಲಿರುವ ಅಪ್ರಾಪ್ತ ಬಾಲಕಿಯರ ಮೇಲಿನ ಚಿತ್ರಹಿಂಸೆಗೆ ನಾನು ಸಾಕ್ಷಿಯಾಗಿದ್ದೇನೆ. ಇಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಹಿಂಸೆಗಳು ತಲೆತಗ್ಗಿಸುವಂಥ ಕೃತ್ಯಗಳಾಗಿವೆ.ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗಳು 14 ರಿಂದ 16 ವರ್ಷದ ಬಾಲಕಿಯರನ್ನು ವಿವಸ್ತ್ರಗೊಳಿಸುತ್ತಾರೆ. ಅವರ ಕೈಕಾಲುಗಳು ಮತ್ತು ಸ್ತನಗಳಿಗೆ ವಿದ್ಯುತ್ ಶಾಕ್ ನೀಡಲಾಗುತ್ತದೆ. ಇದು ಅತ್ಯಂತ ಹೀನಾಯ ಮತ್ತು ಭಯಾನಕ. ಬಾಲಕಿಯರಿಗೆ ಚಿತ್ರಹಿಂಸೆ ನೀಡುವ ಅಗತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.  ಈ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಬಸ್ತಾರ್‍ನಲ್ಲಿ ನಡೆಯುತ್ತಿರುವ ನಕ್ಸಲ್ ವಿರುದ್ಧದ ಹೋರಾಟದಲ್ಲಿ ಸಾಯುತ್ತಿರುವವರು ನಮ್ಮವರೇ ಆಗಿದ್ದಾರೆ. ಅಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಬಲವಂತವಾಗಿ ಹೇರಲಾಗುತ್ತಿದೆ.

ಬುಡಕಟ್ಟು ಜನರನ್ನು ಅವರ ನೆಲದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಹಳ್ಳಿಗಳನ್ನು ಸುಟ್ಟುಹಾಕಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ಅವರು ಹಿಂದಿಯಲ್ಲಿ ವಿವರವಾಗಿ ಬರೆದಿದ್ದಾರೆ.  ಇವೆಲ್ಲ ಜಮೀನುಗಳನ್ನು ಮತ್ತು ಅರಣ್ಯ ಭೂಮಿಯನ್ನು ಕಬಳಿಸುವ ಹುನ್ನಾರ ಹೊರತು ನಕ್ಸಲ್‍ವಾದವನ್ನು ಕೊನೆಗೊಳಿಸುವ ಉದ್ದೇಶವಲ್ಲ ಎಂದು ವರ್ಷಾ ಕಿಡಿಕಾರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin