ಪ್ರತಿಭಟನೆ ಹತ್ತಿಕ್ಕಲು ಪ್ರತಿಭಟನಾಕಾರರ ಮೇಲೆ ವ್ಯಾನ್ ಹರಿಸಿದ ಪೊಲೀಸರು..!

Spread the love

ಫಿಲಿಪ್ಪೀನ್ಸ್.  ಅ.19 :  ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆಯೇ ಪೊಲೀಸರು ವ್ಯಾನ್ ಹರಿಸಿದ  ಪ್ರತಿಭಟನಾಕಾರರನ್ನು ಚದುರಿಸಲೆತ್ನಿಸಿದ ಅಮಾನವೀಯ ಘಟನೆ  ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನಡೆದಿದೆ.  ಅಮೆರಿಕ ನೀತಿಗಳನ್ನು ವಿರೋಧಿಸಿ  ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ವ್ಯಾನ್ ಅನ್ನು ಸುತ್ತುವರಿದಿದ್ದರು ಆ ಸಂದರ್ಭದಲ್ಲಿ ಪೊಲೀಸ್ ವ್ಯಾನ್ ಹಿಂದೆ ಹಾಗೂ ಮುಂದೆ ಚಲಿಸಿ ಪ್ರತಿಭಟನಾಕಾರರ ಮೇಲೆಯೇ ಹರಿಸಿರುವ ದೃಶ್ಯವನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡಿವೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಫಿಲಿಪ್ಪೀನ್ಸ್ ನಿಂದ ಅಮೆರಿಕದ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದರು.  ಪ್ರತಿಭಟನಾಕಾರರನ್ನು ಚದುರಿಸಲು ಫಿಲಿಪೀನ್ಸ್ ಪೊಲೀಸರು ಅಶ್ರುವಾಯುವನ್ನು ಸಿಡಿಸಿದ್ದರು. ಬಳಿಕ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿತ್ತು.

► Follow us on –  Facebook / Twitter  / Google+

 

Facebook Comments

Sri Raghav

Admin