ಪ್ರತಿಭೆ ಗುರುತಿಸಿಕೊಳ್ಳಲು ಜೆಪಿಎಲ್ ಉತ್ತಮ ವೇದಿಕೆ

33
ನರೇಗಲ್ಲ,ಏ.9- ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಮೂಲಕ ಪ್ರತಿಭಾನ್ವಿತ ಕ್ರೀಡಾ ಪ್ರತಿಭೆ ಗುರುತಿಸಿಕೊಳ್ಳಲು ಉತ್ತಮ ವೇದಿಕೆ ನೀಡಿದಂತಾಗುತ್ತದೆ. ಯುವಕರು ಉತ್ಸುಕತೆಯಿಂದ ಜೆಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಪ್ರತಿಭೈಯನ್ನು ಹೊರಹೊಮ್ಮಿಸಬೇಕು ಎಂದು ಜಿಪಂ ಉಪಾಧ್ಯಕ್ಷೆ ರೂಪಾ ಅಂಗಡಿ ಹೇಳಿದರು.ಜಕ್ಕಲಿ ಗ್ರಾಮದಲ್ಲಿ ನಡೆದ ಜೆಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಮನುಷ್ಯನ ಮನೋಲ್ಲಾಸದ ಜೊತೆಗೆ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು.

ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವುದರೊಂದಿಗೆ ಸೋಲೆ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಪಾಲ್ಗೊಳಬೇಕು. ಪ್ರತಿವರ್ಷ ಜೆಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಐಪಿಎಲ್ ಮಾದರಿಯಲ್ಲಿ ಯಶಸ್ವಿಯಾಗಿ ನಡೆಸುವ ಜಕ್ಕಲಿ ಗ್ರಾಮದ ಯುವ ಶಕ್ತಿಯ ಸಂಘಟನಾತ್ಮಕ ಕಾರ್ಯ ಶ್ಲ್ಯಾಘನೀಯ ಎಂದರು.
ಮಲ್ಲಣ್ಣ ಎಂ. ಮೇಟಿ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ಮೊಬೈಲ್‍ಗೆ ಅಂಟಿಕೊಂಡಿದ್ದು, ಕ್ರೀಡೆಯಿಂದ ದೂರ ಉಳಿದು ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ. ಆದ್ದರಿಂದ ಯುವಕರು ಉತ್ತಮ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಜಾಲಣ್ಣವರ, ಉಪಾಧ್ಯಕ್ಷ ಅಶೋಕಪ್ಪ ಯಾವಗಲ್, ಸದಸ್ಯ ಪ್ರಕಾಶ ವಾಲಿ, ಜಗದೀಶ ಪಲ್ಲೆದ, ಚನ್ನಬಸವರಾಜ ಕೊಪ್ಪದ, ಉಮೇಶ ಮೇಟಿ, ಪ್ರವೀಣ ಯಾವಗಲ್ ಸೇರಿದಂತೆ ಇತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin