ಪ್ರತಿಯೊಬ್ಬರೂ ಸಸಿ ನೆಟ್ಟರೆ ಸ್ವಚ್ಛಂದ ಪರಿಸರ
ಚಿಕ್ಕಮಗಳೂರು, ಆ.16- ಮನುಷ್ಯನ ದುರಾಸೆಯಿಂದ ಅರಣ್ಯ ನಶಿಸುತ್ತಿದ್ದು ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸಿದಲ್ಲಿ ಸ್ವಚ್ಚಂದ ಪರಿಸರ ಕಾಣಲು ಸಾಧ್ಯ ಎಂದು ಜಿಲ್ಲಾ ಕಮಾಂಡೆಂಟ್ ಟಿ.ಕೆ.ಪಣಿರಾಜ್ ಹೇಳಿದರು. ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ 70ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಸಿ ನೆಡುವ ಮೂಲಕ ಎಲ್ಲರಿಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ಜಿಲ್ಲೆಯಲ್ಲಿ 350 ಹೋಂ ಗಾಡ್ರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕವಾದವರಿಗೆ ಸೂಕ್ತ ತರಬೇತಿ ನೀಡಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಸೇವಕರಾಗಿ ಕೆಲಸ ಮಾಡುವ ಅವಕಾಶವಿದ್ದು ಅದನ್ನುಸದುಪಯೋಗಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ಆವರಣದಲ್ಲಿ ಉಪ್ಪಿನಲ್ಲಿ ವಿಶೇಷವಾಗಿ ಭಾರತ ಭೂಪಟ ಬಿಡಿಸಲಾಗಿತ್ತು. ಹೋಂ ಗಾರ್ಡ್ ಪ್ರಾಧ್ಯಾಪಕ ಕೃಷ್ಣಮೂರ್ತಿ ನಾಯಕ್, ಸಿಬ್ಬಂದಿ ವಿರೂಪಾಕ್ಷ, ದೇವೇಶ್, ರಾಮಯ್ಯ ಮತ್ತಿತರರು ಇದ್ದರು.