ಪ್ರತಿಯೊಬ್ಬ ಭಾರತೀಯನೂ ಕೂಡ ವಿಐಪಿ ಎಂದು ಬಣ್ಣಿಸಿದ ಪ್ರಧಾನಿ ಮೋದಿ
ನವದೆಹಲಿ, ಏ.20- ನಮಗೆ ಪ್ರತಿಯೊಬ್ಬ ಭಾರತೀಯರೂ ಗಣ್ಯ ವ್ಯಕ್ತಿ (ವಿಐಪಿ) ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳೂ ಸೇರಿದಂತೆ ವಿಐಪಿಗಳು ಕೆಂಪು ದೀಪ ಮತ್ತು ಸೈರನ್ಗಳನ್ನು ತಮ್ಮ ವಾಹನಗಳಲ್ಲಿ ಬಳಸುವ ಸಂಸ್ಕøತಿಗೆ ತೆರೆ ಎಳೆಯುವ ಐತಿಹಾಸಿಕ ನಿರ್ಧಾರ ಕೈಗೊಂಡ ಸರ್ಕಾರದ ನಿಲುವಿಗೆ ವ್ಯಕ್ತವಾದ ಪ್ರಶಂಸೆಗಳ ಸುರಿಮಳೆಗೆ ಮೋದಿ ಪ್ರತಿಕ್ರಿಯಿಸಿದ್ದಾರೆ. ಹಿಂದೆಯೇ ಈ ಪದ್ದತಿ ಹೋಗಬೇಕಿತ್ತು.
ಈಗ ಇದಕ್ಕೆ ಕಾಲ ಕೂಡಿ ಬಂದಿದೆ. ನಮಗೆ ಪ್ರತಿಯೊಬ್ಬ ಭಾರತೀಯರೂ ವಿಶೇಷ ಮತ್ತು ಪ್ರತಿಯೊಬ್ಬ ಭಾರತೀಯರೂ ಗಣ್ಯ ವ್ಯಕ್ತಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Every Indian is special. Every Indian is a VIP. https://t.co/epXuRdaSmY
— Narendra Modi (@narendramodi) April 19, 2017
< Eesanje News 24/7 ನ್ಯೂಸ್ ಆ್ಯಪ್ >