ಪ್ರಧಾನಿ ಮೋದಿ ಭೇಟಿ ಮಾಡಿದ ದಿ ಗ್ರೇಟ್ ಖಲಿ

Khali

ನವದೆಹಲಿ. ಡಿ.02 : ದಿ ಗ್ರೇಟ್ ಖಲಿ ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅವರ ಕಚೇರಿಯಲ್ಲಿ ಭೇಟಿಮಾಡಿ, ನೋಟು ನಿಷೇಧ ಮಾಡಿ ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿರ್ಧಾರ ಕೈಗೊಡಿದ್ದಕ್ಕೆ ಶುಭಕೋರಿದರು. ನೋಟು ನಿಷೇಧದ ಪ್ರಧಾನಿ ನಿರ್ಧಾರವನ್ನು ಹೊಗಳಿದ ಖಲಿ ಈ ನಿರ್ಧಾರದಿಂದ ದೇಶಕ್ಕೆ ಲಾಭವಾಗಲಿದೆ, ಇಂತಹ ದಿಟ್ಟ ಹೆಜ್ಜೆಯಿಟ್ಟ ಕೇಂದ್ರ ಸರ್ಕಾರದ ಕಾರ್ಯವನ್ನು ಶ್ಲಾಘಿಸುವುದಾಗಿ ಹೇಳಿದ್ದಾರೆ. ನೋಟು ನಿಷೇಧದಿಂದಾಗಿ ಜನರಿಗೆ ತಾತ್ಕಾಲಿಕ ಸಮಸ್ಯೆಯಾಗುತ್ತಿದೆ ನಿಜ . ಆದರೆ ಭವಿಷ್ಯದಲ್ಲಿ ದೇಶಕ್ಕೆ ಲಾಭವಾಲಿದೆ ಎಂದಿದ್ದಾರೆ.ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಈ ಕೆಲಸ ಮಾಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

Sri Raghav

Admin