ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

bagepalli
ಬಾಗೇಪಲ್ಲಿ, ಅ.14- ಪ್ರವಾದಿ ಹಜರತ್ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸೋನು ಡಗರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪಟ್ಟಣದ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ಸಾವಿರಾರು ಮುಸ್ಲಿಂ ಬಾಂಧವರು ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇಸ್ಲಾಂ ಧರ್ಮದ ಸಂಸ್ಥಾಪಕರಾದ ಮಹಮದ್ ಪೈಗಂಬರ್ ಬಗ್ಗೆ ಇತ್ತೀಚೆಗೆ ಗುಜರಾತಿನ ಕೋಮುವಾದಿ ಧೋರಣೆಯುಳ್ಳ ಮಹಿಳೆ ಸೋನು ಡಗರ್ ಎಂಬುವವರು ಅವಹೇಳನಕಾರಿ ಮಾತನಾಡಿರುವುದು ಇಸ್ಲಾಂ ಧರ್ಮದವರಿಗೆ ತೊಂದರೆಯುಂಟು ಮಾಡಿ, ಸಮಾಜದಲ್ಲಿ ಕೋಮು ದಳ್ಳುರಿ ಉಂಟು ಮಾಡಲು ಹೊರಟಿದ್ದಾರೆ. ಇಂತಹಾ ಕೋಮುವಾದಿ ಶಕ್ತಿಗಳ ಮೇಲೆ ಕೇಂದ್ರ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ಮುಸ್ಲಿಂ ಧರ್ಮದ ಹಿರಿಯ ಧರ್ಮಗಳು, ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್ ಆರ್.ಶೂಲದಯ್ಯದವರಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ಹಿರಿಯ ಜಾಮೀಯಾ ಮಸೀದಿ ಮುಖ್ಯಸ್ಥರು, ಮಸೀದಿಗಳ ಧರ್ಮಗುರುಗಳು, ಸಾವಿರಾರು ಮುಸ್ಲಿಂಬಾಂಧವರು ಮೆರವಣಿಗೆಯಲ್ಲಿ ಹಾಜರಿದ್ದರು.

Sri Raghav

Admin