ಪ್ರವಾಸಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ದು ಲೈಂಗಿಕ ಕಿರುಕುಳ : ಪ್ರಾಂಶುಪಾಲ, ಉಪನ್ಯಾಸಕರು ಅಮಾನತು
ಚಿತ್ರದುರ್ಗ,ಫೆ.23-ಅನುಮತಿ ಪಡೆಯದೆ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಹಾಗೂ ಇಬ್ಬರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಚಿತ್ರದುರ್ಗ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ನಾಗರಾಜ್, ಉಪನ್ಯಾಸಕರಾದ ಧನಶಂಕರ್, ಕೆ.ನವೀನ್ ಅವರನ್ನು ಅಮಾನತುಗೊಳಿಸಿ ತಕ್ಷಣದಿಂದಲೇ ಆದೇಶ ಜಾರಿಗೊಳಿಸುವಂತೆ ಚಿತ್ರದುರ್ಗ ಡಿಡಿಪಿಐಗೆ ನಿರ್ದೇಶನ ನೀಡಲಾಗಿದೆ. ಇಲಾಖೆಗೆ ತಿಳಿಸದೆ ವಿದ್ಯಾರ್ಥಿನಿಯರನ್ನು ತಮಿಳುನಾಡಿನ ಚೆನ್ನೈಗೆ ಪ್ರವಾಸ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕುರಿತು ಬಾಲಕಿಯರಿಂದ ಲಿಖಿತ ದೂರು ಆಧರಿಸಿ ಇಲಾಖೆ ತನಿಖೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಾಲ್ವರ ಸಮಿತಿಯನ್ನು ರಚಿಸಿದೆ. ಸಮಿತಿಯ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS