ಪ್ರವಾಸಿ ಭಾರತೀಯ ದಿವಸ್ : ದೇಶ-ವಿದೇಶ ಸೇರಿದಂತೆ ಒಟ್ಟು 7ಸಾವಿರ ಮಂದಿ ನೋಂದಣಿ
ಬೆಂಗಳೂರು, ಜ.7- ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮಳಿಗೆಯಲ್ಲಿ ಆರಂಭವಾಗಿರುವ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇಶ-ವಿದೇಶ ಸೇರಿದಂತೆ ಒಟ್ಟು 7ಸಾವಿರ ಮಂದಿ ನೋಂದಣಿ ಮಾಡಿಕೊಂಡಿರುವುದು ವಿಶೇಷವಾಗಿದೆ. ಹಿಂದೆ ನಡೆದ 14 ಕಾರ್ಯ ಕ್ರಮಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ನೋಂದಣಿ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ 7ಸಾವಿರ ಮಂದಿ ನೋಂದಾಯಿಸಿಕೊಳ್ಳುವ ಮೂಲಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತೀಯ ಪ್ರವಾಸಿ ದಿವಸ್ ಎಲ್ಲರ ಗಮನ ಸೆಳೆದಿದೆ.
ವಿದೇಶಗಳ ಸುಮಾರು 1200 ಪ್ರತಿನಿಗಳು ನೋಂದಾಯಿಸಿ ಕೊಂಡಿದ್ದು, ದೇಶದ 12ಕ್ಕೂ ಹೆಚ್ಚು ರಾಜ್ಯಗಳು ಮಳಿಗೆಗಳನ್ನು ತೆರೆದಿವೆ. ಹೂಡಿಕೆದಾರರನ್ನು ಬಹಳವಾಗಿ ಸೆಳೆದಿರುವ ಈ ಕಾರ್ಯಕ್ರಮದಿಂದಾಗಿ ಹೆಚ್ಚು ಹೂಡಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಬೆಂಗಳೂರಿನಂತಹ ಪ್ರಮುಖ ನಗರದಲ್ಲಿ ಪ್ರವಾಸಿ ಭಾರತೀಯ ದಿವಸ್ ನಡೆಯುತ್ತಿರುವುದರಿಂದ ಈ ಹಿಂದೆ ಕೆಲವು ನಗರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಂಪರ್ಕ ವ್ಯವಸ್ಥೆ ಮತ್ತಿತರ ಕುಂದು-ಕೊರತೆಗಳಿಂದ ಜನ ಹೆಚ್ಚಾಗಿ ಸೇರುತ್ತಿರಲಿಲ್ಲ. ಆದರೆ, ಈ ಬಾರಿ ಹೆಚ್ಚಿನ ಬಂಡವಾಳ ಹರಿದು ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಮೊದಲ ದಿನ:ಪ್ರವಾಸಿ ಭಾರತೀಯ ದಿವಸ್ನ ಮೊದಲ ದಿನವಾದ ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಆಗಮಿಸರಿಲಿಲ್ಲ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿದ್ದು, ಅಂದು ಹೆಚ್ಚಿನ ಮಂದಿ ಪಾಲ್ಗೊಳ್ಳುವವರಿದ್ದಾರೆ.
ಇಂದು ಪ್ರತಿನಿಗಳು, ಪ್ರದರ್ಶಕರು, ಹೂಡಿಕೆದಾರರು ಮಾತ್ರ ಭಾಗವಹಿಸಿದ್ದರು.