ಪ್ರವಾಹದಲ್ಲಿ ಸಿಲುಕಿ ರಾತ್ರಿ ಕಳೆದ ಆಟೋ ಚಾಲಕನ ರಕ್ಷಣೆ

Spread the love

Auto-Driver--02

ಹಾವೇರಿ,ಅ.4-ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡು ರಾತ್ರಿಯಿಡೀ ಮುಳ್ಳುಕಂಟಿಯೊಂದರ ಆಶ್ರಯ ಪಡೆದು ಕಂಗಾಲಾಗಿದ್ದ ಆಟೋ ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.  ರಾಣಿಬೆನ್ನೂರು ಮೂಲದ ಆಟೋ ಚಾಲಕ ಗಂಗಪ್ಪ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟುತ್ತಿದ್ದಾಗ ಆಟೋ ಸಮೇತ ಕೊಚ್ಚಿಹೋಗಿದ್ದನು. ಈ ವೇಳೆ ಜೀವ ಉಳಿಸಿಕೊಳ್ಳಲು ಆಟೋ ಬಿಟ್ಟು ನೀರಿಗೆ ಹಾರಿ ಮರವೊಂದಕ್ಕೆ ಆತುಕೊಂಡಿದ್ದ ಮುಳ್ಳುಕಂಟಿಯನ್ನು ಹಿಡಿದು ರಾತ್ರಿಯೆಲ್ಲ ಚಳಿಗೆ ನಡುಗುತ್ತ ಕುಳಿತಿದ್ದಾನೆ.

ಬೆಳಗ್ಗೆ ಇದನ್ನು ನೋಡಿದ ಕೆಲ ಸ್ಥಳೀಯ ಯುವಕರು ಗಂಗಪ್ಪನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಜೀವ ರಕ್ಷಿಸಿದ ಯುವಕರಿಗೆ ಗಂಗಪ್ಪ ಧನ್ಯವಾದ ಹೇಳಿದ್ದಾನೆ.   ರಾಣಿಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sri Raghav

Admin