ಪ್ರಿಯಾಂಕ ಚೋಪ್ರಾ ಈಗ ಕಲ್ಪನಾ ಚಾವ್ಲಾ

21

ಜೀವನಗಾಥೆ ಪಾತ್ರಗಳಲ್ಲಿ ಹೆಚ್ಚು ಮುತುವರ್ಜಿ ವಹಿಸಿ ನಟಿಸುವುದರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪಳಗಿದ ಕೈ. ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಚಿತ್ರದಲ್ಲಿ ತನ್ನ ಶ್ರದ್ಧೆ ಮತ್ತು ಬದ್ಧತೆಯನ್ನು ಪಿಂಕಿ ತೋರ್ಪಡಿಸಿದ್ದಾಳೆ. 2014ರಲ್ಲಿ ತೆರೆಕಂಡ ಮೇರಿ ಕೋಮ್ ಚಿತ್ರಕ್ಕಾಗಿ ಈ ನಟಿ ಮೂರು ತಿಂಗಳ ಕಾಲ ಕಠಿಣ ತರಬೇತಿಯಲ್ಲಿ ಪಾಲ್ಗೊಂಡಳು. ಅಲ್ಲದೇ ಮೇರಿ ಕೋಮ್ ಬಾಕ್ಸಿಂಗ್ ಶೈಲಿಯನ್ನು ಅಭ್ಯಾಸ ಮಾಡಲು ಮಣಿಪುರದ ಆಕೆಯ ಊರಿಗೆ ತೆರಳಿ ಅಭ್ಯಾಸ ಮಾಡಿದ್ದಳು. ಇದೇ ಸಂದರ್ಭದಲ್ಲಿ ಪ್ರಿಯಾಂಕಾಳ ತಂದೆ ನಿಧನರಾದರೂ ಆಕೆಯ ಬದ್ದತೆಗೆ ಕುಂದುಂಟಾಗಲಿಲ್ಲ. ಇಂಥ ಕಮಿಟ್‍ಮೆಂಟ್ ನಟಿ ಈಗ ಭಾರತದ ಮತ್ತೊರ್ವ ಹೆಮ್ಮೆಯ ಪುತ್ರಿ ಗಗನಯಾತ್ರಿ ಕಲ್ಪನಾ ಚಾವ್ಲಾರ ಪಾತ್ರದಲ್ಲಿ ನಟಿಸಲಿದ್ದಾಳೆ.ಈ ಸುದ್ದಿ ಎರಡು ವರ್ಷಗಳಷ್ಟು ಹಳೆಯದಾದರೂ, ಈಗ ಮರುಜೀವ ಪಡೆದಿದೆ. ಪಿಂಕ್ ಸಿನಿಮಾ ನಿರ್ದೇಶಕ ಅನಿರುದ್ಧ್ ಚೌಧರಿ ನಿರ್ದೇಶನದ
ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಇನ್ನೊಂದು ಹೊಸ ಪ್ರಾಜೆಕ್ಟ್‍ಗೆ ಪಿಂಕಿ ಸಹಿ ಹಾಕಿದ್ದಾಳೆ ಎಂಬ ಸುದ್ದಿಯೂ ಇದೆ. ಅಮೆರಿಕಾದಲ್ಲಿ ಕ್ವಾಂಟಿಕೋ ಟಿವಿ ಸೀರಿಯಲ್ ಮತ್ತು ಬೇವಾಚ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪಿಂಕಿ ಭಾರತಕ್ಕೆ ಬರುತ್ತಿದ್ದಂತೆ ಈ ಸುದ್ದಿಗೆ ಮತ್ತಷ್ಟು ರೂಪ ಲಭಿಸಿದೆ. ಪಿಂಕ್ ಸ್ಕ್ರಿಪ್ಟ್‍ನನ್ನು ನೋಡಿ ಎಸ್ ಅಂದಿದ್ದಾಳಂತೆ, ಆಕೆಗೆ ಕಲ್ಪನಾ ಚಾವ್ಲಾರ ಜೀವನಗಾಥೆ ಕುರಿತು ಚಿತ್ರದ ಬಗ್ಗೆ ಆಸಕ್ತಿ ಮೂಡಿದೆಯಂತೆ ಇತ್ಯಾದಿ ಸಮಾಚಾರಗಳು ಕೇಳಿ ಬಂದಿವೆ.ಈ ಪ್ರಾಜೆಕ್ಟ್ ಬಗ್ಗೆ ಕಳೆದ ಏಳು ವರ್ಷಗಳಿಂದ ನಿರ್ದೇಶಕ ಪ್ರಿಯ ಮಿಶ್ರಾ ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಪಿಂಕಿಯನ್ನು ಗಗನಯಾನಿ ಕಲ್ಪನಾ ಚಾವ್ಲಾ ಪಾತ್ರದಲ್ಲಿ ನೋಡಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin