ಪ್ರೀತಿಸಿದವಳನ್ನೇ ಮದುವೆಯಾದ, ಮರುದಿನವೇ ನೇಣಿಗೆ ಶರಣಾದ..!

Student-Suicide

ಮೈಸೂರು, ಮೇ 5- ಪ್ರೀತಿಸಿದವಳನ್ನು ವಿವಾಹವಾದ ಬಿಎಂಟಿಸಿ ಕಂಡಕ್ಟರೊಬ್ಬ ಎರಡು ದಿನಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ವಾಸಿ ನಾಗಯ್ಯಮಠಪತಿ (30) ಆತ್ಮಹತ್ಯೆ ಮಾಡಿಕೊಂಡ ಬಿಎಂಟಿಸಿ ಕಂಡಕ್ಟರ್. ಮೂಲತಃ ರಾಣೇಬೆನ್ನೂರಿನವರಾದ ಮಠಪತಿ ಮೈಸೂರಿನ ಪಡುವಾರಹಳ್ಳಿಯ ಕಾವ್ಯಶ್ರೀ ಎಂಬ ಯುವತಿಯನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯವರಿಗೆ ತಿಳಿದಿಲ್ಲ ಎನ್ನಲಾಗಿದೆ.  ಮನೆಯವರು ಮಠಪತಿಗೆ ಬೇರೊಬ್ಬ ಯುವತಿಯೊಂದಿಗೆ ವಿವಾಹ ಸಿದ್ಧತೆ ನಡೆಸಿದ್ದು, ಮೇ 8ರಂದು ವಿವಾಹ ನಿಶ್ಚಿಯವಾಗಿತ್ತು. ಮೇ 3ರಂದು ಮೈಸೂರಿಗೆ ಬಂದ ಮಠಪತಿ ನಿನ್ನೆ ಪ್ರೇಯಸಿ ಕಾವ್ಯಶ್ರೀಯನ್ನು ಭೇಟಿಯಾಗಿ ಒಂಟಿಕೊಪ್ಪಲಿನಲ್ಲಿನ ದೇವಸ್ಥಾನದಲ್ಲಿ ಆಕೆಯನ್ನು ವಿವಾಹವೂ ಆಗಿದ್ದಾರೆ.ನಂತರ ಜೆ.ಪಿ.ನಗರ ನವೋದಯ ಬಡಾವಣೆಯಲ್ಲಿರುವ ಸ್ನೇಹಿತನ ಮನೆಗೆ ಬಂದಿದ್ದು, ಅಲ್ಲಿ ಆತನಿಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಾನೆ. ಪತ್ನಿಯೊಂದಿಗೆ ಸ್ನೇಹಿತನ ಮನೆಯಲ್ಲೇ ಉಳಿದುಕೊಂಡಿದ್ದಾನೆ.   ಇಂದು ಬೆಳಗ್ಗೆ ಪತ್ನಿ ಸ್ನಾನಕ್ಕೆ ತೆರಳಿದ್ದಾಗ ಮಠಪತಿ ತೊಟ್ಟಿದ್ದ ಲುಂಗಿಯಿಂದಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin