ಫೇಸ್ಬುಕ್ ನಲ್ಲಿ ಮಹಿಳೆಗೆ ಕಿರುಕುಳ ಕೊಡುತ್ತಿದ್ದ ಕಾಮುಕನಿಗೆ ಧರ್ಮದೇಟು

Kamuka--01

ತುಮಕೂರು : ಸೆ.01 : ಫೇಸ್ಬುಕ್ ಲಿಂಕ್ ನಲ್ಲಿ ಪರಿಚಯ ಮಾಡಿಕೊಂಡು ವಿವಾಹಿತ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಕಾಮುಕನಿಗೆ ಇಂದು ಸಾರ್ವಜನಿಕರಿಂದ ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗ ಥಳಿಸಿದ ಘಟನೆ ತುಮಕೂರು ನಗರದ ಭೀಮಸಂದ್ರದಲ್ಲಿ ನಡೆದಿದೆ.ಮೋಹನ್ ಎಂಬುವನು ಕಳೆದ ಆರು ತಿಂಗಳಿಂದ ಗೃಹಿಣಿಗೆ ಹಿಂಸೆ ನೀಡುತ್ತಿದ್ದ ಇದರ ಜೊತೆಗೆ,15 ಲಕ್ಷ ರೂ ಗೆ ಡಿಮೆಂಡ್ ಮಾಡಿದ್ದ ಅಲ್ಲದೆ ನನಗೆ ಹಣ ನೀಡಲೆ ಬೇಕು ಎಂದು ಫೇಸ್ ಬುಕ್ ನಲ್ಲಿ ಒತ್ತಾಯಿಸುತಿದ್ದ ಇದರಿಂದ ರೋಸಿ ಹೋಗಿ ಗಂಡ ಹಾಗು ಸಂಬಂಧಿಕರಿಗೆ ಮಾಹಿತಿ ನೀಡಿದ್ದಳು.

Kamukah--05

ಮೋಹನ್ ವರ್ತನೆಯಿಂದ ಬೇಸತ್ತಿದ್ದ ಮಹಿಳೆಯ ಪೋಷಕರು 6-7 ತಿಂಗಳಿನಿಂದ ಮೋಹನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕಿಲಾಡಿ ಮೋಹನ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದನು. ಆದ್ರೆ ಇಂದು ಬೆಳಗ್ಗೆ ಮಹಿಳೆಯ ಸಹೋದರ ಮಂಜುನಾಥನ ಕೈಗೆ ಅಚಾನಕ್ಕಾಗಿ ಮೋಹನ್ ಭೀಮಸಂದ್ರದ ಬಳಿ ಯಾವುದೋ ಮದುವೆ ಮನೆಗೆ ಬಂದವನು ಸಿಕ್ಕಿಬಿದ್ದಿದ್ದಾನೆ.

Kamuka--03

ಕೂಡಲೇ ಮಂಜುನಾಥ್ ಮೋಹನ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಕಾರು ಚಾಲಕನ ಕೆಲಸ ಮಾಡುತ್ತಿರೋದಾಗಿ ತಿಳಿದುಬಂದಿದೆ. ಜೊತೆಗೆ ನಾನು ಫೇಸ್ಬುಕ್ ನಲ್ಲಿ ಮಹಿಳೆಯ ಫೋಟೋ ಪೋಸ್ಟ್ ಮಾಡಿದ್ದು ನಿಜ ಎಂಬುದಾಗಿ ಆರೋಪಿ ಮೋಹನ್ ಮಾಧ್ಯಮಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

Kamukah--05

Sri Raghav

Admin