ಫೈನಲ್ ನಲ್ಲಿ ಮುಗ್ಗರಿಸಿದ ಸ್ಟ್ಯಾನ್ ವಾವಿಂಕ್ರಾ, ಅಲೆಗ್ಸಾಂಡರ್ ಜುರೀವ್ ಚಾಂಪಿಯನ್

St-Per

ಸೆಂಟ್‍ಪೀಟರ್‍ಬರ್ಗ್, ಸೆ.26- ಇತ್ತೀಚೆಗಷ್ಟೆ ನಡೆದ ಯುಎಸ್ ಚಾಂಪಿಯನ್‍ಶಿಪ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ ಸ್ವಿಜ್ ಆಟಗಾರ ಸ್ಟ್ಯಾನ್ ವಾವಿಂಕ್ರಾ ಇಲ್ಲಿ ನಡೆದ ಸೆಂಟ್ ಪೀಟರ್‍ಬರ್ಗ್ ಟೆನಿಸ್ ಚಾಂಪಿಯನ್‍ಶಿಪ್‍ನ ಫೈನಲ್ ಪಂದ್ಯದಲ್ಲಿ ಜರ್ಮನ್ ಆಟಗಾರ ಅಲೆಗ್ಸಾಂಡರ್ ಜುರೀವ್ ವಿರುದ್ಧ 6-2, 3-6, 7-5 ಸೆಟ್‍ಗಳಿಂದ ಹೀನಾಯ ಸೋಲು ಅನುಭವಿಸಿ ಪ್ರಶಸ್ತಿಯಿಂದ ವಂಚಿತರಾದರು. 19 ವರ್ಷದ ಯುವ ಜರ್ಮನ್ ಆಟಗಾರ 3ನೆ ಶ್ರೇಯಾಂಕದ ವಾವಿಂಕ್ರಾ ವಿರುದ್ಧ ಮೊದಲ ಸೆಟ್‍ಅನ್ನು 6-2 ರಿಂದ ಗೆಲುವು ಸಾಧಿಸಿ ಮುನ್ನಡೆ ಪಡೆದರು. ಎರಡನೆ ಸೆಟ್‍ನಲ್ಲಿ ತಿರುಗಿಬಿದ್ದ ಸ್ವಿಸ್ ಆಟಗಾರ 3-6 ಸೆಟ್‍ನಿಂದ ಗೆಲುವು ಸಾಧಿಸಿ ತಿರುಗೇಟು ನೀಡಿದರು.

ಹೀಗಾಗಿ ಮುಂದಿನ ಸೆಟ್ ಭಾರೀ ರೋಚಕ ಪಡೆದಿತ್ತು. 27ನೆ ರ್ಯಾಂಕ್‍ನ ಜರ್ಮನ್ ಆಟಗಾರ ಪ್ರಬಲ ಸರ್ವ್ ಆಕರ್ಷಕ ಡ್ರೈವ್ ಮೂಲಕ ಅಂತಿಮ ಸೆಟ್‍ಅನ್ನು 7-5ರಿಂದ ಗೆಲುವು ಸಾಧಿಸಿ ಮೊದಲನೆ ಬಾರಿಗೆ ಎಟಿಪಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಕುರಿತು ಹರ್ಷ ವ್ಯಕ್ತಪಡಿಸಿದ ಜರ್ಮನ್ ಆಟಗಾರ, ಟೆನಿಸ್ ವೃತ್ತಿಯಲ್ಲಿ ಇದೇ ಮೊದಲನೆ ಬಾರಿಗೆ ಪ್ರಶಸ್ತಿ ಗೆದ್ದಿದ್ದೇನೆ. ಪಂದ್ಯ ತುಂಬ ಕಠಿಣವಾಗಿತ್ತು. ಆದರೆ, ಆತ್ಮವಿಶ್ವಾಸದಿಂದ ಹೋರಾಟ ಮಾಡಿ ಗೆಲುವು ಸಾಧಿಸಿದ್ದಕ್ಕೆ ಹೆಮ್ಮೆಯಾಗಿದೆ ಎಂದರು.

► Follow us on –  Facebook / Twitter  / Google+

Sri Raghav

Admin