ಫೋಟೋಶೂಟ್ ನೆಪದಲ್ಲಿ ಕರೆದೊಯ್ದು ರೂಪದರ್ಶಿ ಮೇಲೆ ಅತ್ಯಾಚಾರ, ಕೊಲೆ

Moded-Dead

ತೈಪೆ, ಮಾ.18-ತೈವಾನ್ ರೂಪದರ್ಶಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಜಧಾನಿ ತೈಪೆಯಲ್ಲಿ ನಡೆದಿದೆ. ಈ ಸಂಬಂಧ ಛಾಯಾಗ್ರಾಹಕ ಮತ್ತು ಆತನ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ. ನವೋಮಿ ಚೆನ್ (28) ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ರೂಪದರ್ಶಿ. ಈ ಕುಕೃತ್ಯಕ್ಕಾಗಿ ಚೆಂಗ್ ಯು ಹಾಗೂ ಆತನ ಗೆಳತಿ ಲಿಯಾಂಗ್ ಸು-ಹ್ಯುಯಿ ಈಗ ಪೊಲೀಸರ ವಶದಲ್ಲಿದ್ದಾರೆ.  ಫೋಟೋಶೂಟ್ ನೆಪದಲ್ಲಿ ಇವರಿಬ್ಬರು ನವೋಮಿಯನ್ನು ಕರೆದೊಯ್ದಿದ್ದರು.

ರೂಪದರ್ಶಿಯ ನಗ್ನ ಶವ ತೈಪೆ ನಗರದ ಪಾಳುಬಿದ್ದ ಶಾಪಿಂಗ್ ಮಾಲ್‍ನಲ್ಲಿ ಪತ್ತೆಯಾಗಿತ್ತು. ನವೋಮಿ ಮತ್ತು ಲಿಯಾಂಗ್ ಗೆಳತಿಯರು. ತನ್ನ ಸ್ನೇಹಿತೆಯನ್ನು ನಂಬಿಸಿ ತನ್ನ ಪ್ರಿಯಕರನ ಮೂಲಕ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲು ಲಿಯಾಂಗ್ ಕುಮ್ಮಕ್ಕು ನೀಡಿದ್ದಳು. ನವೋಮಿಯನ್ನು ಕೊಂದ ನಂತರ ಇವರು ಆಕೆಯ ಬಳಿಯಿದ್ದ ಬೆಲೆಬಾಳುವ ವಸ್ತುಗಳು ಮತ್ತು ಮೊಬೈಲ್ ದೋಚಿ, ಆಕೆ ಬಳಿ ಇದ್ದ ಕ್ರೆಡಿಡ್ ಕಾರ್ಡ್‍ನಿಂದ ಪಂಚತಾರ ಹೋಟೆಲ್‍ನಲ್ಲಿ ತಂಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin