ಫೋಟೋ ತೆಗೆದುಕೊಳ್ಳಲು ನಿಂತಿದ್ದ ಯೋಧರ ಮೇಲೆ ಟ್ರಕ್ ಹರಿಸಿದ ಉಗ್ರ : ನಾಲ್ವರ ಸಾವು (Video)

https://www.youtube.com/watch?v=6jdjQF8Dmk8

ಜೆರುಸಲೆಂ, ಜ.9- ಯೋಧರಿದ್ದ ಗುಂಪಿನ ಮೇಲೆ ಉಗ್ರನೊಬ್ಬ ಟ್ರಕ್ ಹರಿಸಿದ ಪರಿಣಾಮ ಮೂವರು ಮಹಿಳೆಯರೂ ಸೇರಿದಂತೆ ನಾಲ್ವರು ಸೈನಿಕರು ಹತರಾಗಿ ಅನೇಕರು ಗಾಯಗೊಂಡಿರುವ ಘಟನೆ ನಿನ್ನೆ ಚಾರಿತ್ರಿಕ ಜೆರುಸಲೆಂನ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆದಿದೆ.   ಪೂರ್ವ ಜೆರುಸಲೆಂನ ಪ್ರಾಚೀನ ನಗರ ಮತ್ತು ಪೀಸ್ ಫಾರೆಸ್ಟ್ ಎಂಬ ಪ್ರಸಿದ್ಧ ತಾಣಕ್ಕೆ ಇಸ್ರೇಲ್ ಯೋಧರು ಪ್ರವಾಸಕ್ಕೆ ಬಂದಿದ್ದರು. ಫೋಟೆ ತೆಗೆಸಿಕೊಳ್ಳಲು ನಿಂತಿದ್ದ ಗುಂಪಿನ ಮೇಲೆ ಪ್ಯಾಲೆಸ್ತೀನ್ ಉಗ್ರಗಾಮಿಯೊಬ್ಬ ಟ್ರಕ್ ಹರಿಸಿದ. ಈ ಅನಿರೀಕ್ಷಿತ ದಾಳಿಯಲ್ಲಿ 20ರ ವಯೋಮಾನದ ಮೂವರು ಮಹಿಳಾ ಯೋಧರು ಮತ್ತು ಮತ್ತೊಬ್ಬ ಯುವ ಸೈನಿಕ ಸಾವಿಗೀಡಾಗಿ, ಅನೇಕರು ಗಾಯಗೊಂಡಿದ್ದಾರೆ.

ಜೆರುಸಲೆಂನ ಅಮೆರಿಕ ರಾಜತಾಂತ್ರಿಕ ಕಚೇರಿ ಮತ್ತು ವಿಶ್ವಸಂಸ್ಥೆಯ ಕಾರ್ಯಾಲಯದ ಸಮೀಪವೇ ಈ ದಾಳಿ ನಡೆದಿದೆ. ಈ ಕೃತ್ಯದ ಹಿಂದೆ ಹಮಾಸ್ ಉಗ್ರರ ಕೈವಾಡ ಇದೆ ಎಂದು ಶಂಕಿಸಲಾಗಿದೆ.  ಸ್ಥಳಕ್ಕೆ ಭೇಟಿ ನೀಡಿದ್ದ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಈ ಕೃತ್ಯವನ್ನು ಖಂಡಿಸಿದ್ದಾರೆ. ಈ ದಾಳಿಗೆ ಪ್ಯಾಲೆಸ್ತೀನ್ ಉಗ್ರರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin