ಫ್ಯಾಷನ್ ಶೋನಲ್ಲಿ ಸನ್ನಿ ಕ್ಯಾಟ್‍ವಾಕ್

Sunny-Leaon-01
ನೀಲಿ ಚಿತ್ರಗಳ ಬೋಲ್ಡ್ ನಟಿ, ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಇದೀಗ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಮುಂಬರುವ ನ್ಯೂಯಾರ್ಕ್ ಫ್ಯಾಷನ್ ವೀಕ್‍ನಲ್ಲಿ ಕ್ಯಾಟ್‍ವಾಕ್ ಮಾಡಲಿದ್ದಾಳೆ. ಅಂತಾರಾಷ್ಟ್ರೀಯ ಫ್ಯಾಷನ್ ರ್ಯಾಂಪ್‍ನಲ್ಲಿ ಬಾಲಿವುಡ್ ನಟಿಯೊಬ್ಬಳು ಮಾರ್ಜಾಲ ನಡಿಗೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.ನ್ಯೂಯಾರ್ಕ್ ಫ್ಯಾಷನ್ ವೀಕ್‍ನಲ್ಲಿ ಭಾಗವಹಿಸಲು ಅವಕಾಶ ಗಿಟ್ಟಿಸುವುದು ಸುಲಭದ ಮಾತಲ್ಲ. ಇಂಥ ಅದೃಷ್ಟ 35ರ ಹರೆಯದ `ಜಿಸ್ಮ್’ ನಾಯಕಿಗೆ ಒಲಿದಿದೆ. ಖ್ಯಾತ ವಸ್ತ್ರ ವಿನ್ಯಾಸಕಿ ಅರ್ಚನಾ ಕೋಚರ್ ಅವರು ವಿನ್ಯಾಸಗೊಳಿಸಿದ

ಉಡುಪು ಧರಿಸಿ ಈ `ವಸ್ತ್ರದ್ವೇಷಿ’ ರ್ಯಾಂಪ್ ಮೇಲೆ ತಮ್ಮ ಒಲನವು-ವಯ್ಯಾರ ಪ್ರದರ್ಶಿಸಲಿದ್ದಾಳೆ.ನಾನು ಭಾವೋದ್ವೇಗಳಾಗಿದ್ದೇನೆ. ಸೆ.8ರಂದು ನ್ಯೂಯಾರ್ಕ್ ಫ್ಯಾಷನ್ ವೀಕ್ ಎಸ್‍ಎಸ್ 17ರಲ್ಲಿ ನಾನು ಕ್ಯಾಟ್‍ವಾಕ್ ಮಾಡುತ್ತೇನೆ ಎಂದು ಸನ್ನಿ ಟ್ವೀಟ್ ಮಾಡಿದ್ದಾಳೆ. ಸನ್ನಿ ಫ್ಯಾಷನ್ ವೀಕ್‍ನಲ್ಲೂ ಸೈ ಅನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

► Follow us on –  Facebook / Twitter  / Google+

 

Sri Raghav

Admin